×
Ad

ಎಚ್ಚರ! ಇಲ್ಲಿ ಕಲ್ಲಂಗಡಿ ಜ್ಯೂಸ್‌ಗೆ ರಾಸಾಯನಿಕ ಸೇರಿಸುತ್ತಾರೆ! : ಕುಡಿಯುವ ಮುಂಚೆ ಅವಲೋಕಿಸಿ ನೋಡಿ!

Update: 2016-02-27 16:14 IST

 ಕಾಸರಗೋಡು: ಕಲ್ಲಂಗಡಿ ಜ್ಯೂಸ್ ಅಧಿಕ ರುಚಿ ಮತ್ತು ಸಿಹಿಯಿದ್ದರೆ ಅದರ ಬಗ್ಗೆ ಜಾಗೃತರಾಗಿರಿ. ಅದರಲ್ಲಿ ರಸಾಯನಿಕ ವಸ್ತುಗಳನ್ನು ಸೇರಿಸಿರಬಹುದು. ಕಾಂಞಂಗಾಡ್ ವ್ಯಾಪಾರಭವನದ ಸಮೀಪ ತುಂಬ ಸಮಯದಿಂದ ಇದ್ದ ಜ್ಯೂಸ್ ಅಂಗಡಿಯಲ್ಲಿ ಪತ್ತೆಯಾದ ರಸಾಯನಿಕವಸ್ತು ಆಹಾರ ಭದ್ರತಾ ಇಲಾಖೆಯ ಇತಿಹಾಸದಲ್ಲಿಯೇ ಪ್ರಥಮದ್ದಾಗಿದೆ ಎನ್ನಲಾಗಿದೆ.ಸೂಪರ್ ಗ್ಲೋ ಹೈಎಫೀಶಿಯನ್ ಇಲೆಕ್ಟ್ರೋ ಪ್ಲೇಟಿಂಗ್ ಫಾರ್ಮ್ಯುಲೇಶನ್ ಎಂಬ ಇಲೆಕ್ಟ್ರೋ ಪ್ಲೇಟಿಂಗ್‌ಗೆ ಬಳಸಲಾಗುವ ರಸಾಯನಿಕ ವಸ್ತುವನ್ನು ಕಲ್ಲಂಗಡಿ ಜ್ಯೂಸ್ ಬೆರೆಸಿ ಮಾರಾಟ ನಡೆಸಲಾಗುತ್ತಿತ್ತು ಎಂದು ಪರಿಶೀಲನೆಯಲ್ಲಿ ಗೊತ್ತಾಗಿದೆ.

 ಇದು ಸಕ್ಕರೆ ಸಾವಿರ ಪಟ್ಟು ಸಿಹಿ ಮತ್ತು ಸ್ವಲ್ಪ ಮತ್ತನ್ನೂ ನೀಡುತ್ತದೆ. ಇದಕ್ಕಾಗಿ ಈ ಜ್ಯೂಸ್ ಅಂಗಡಿಯನ್ನು ಹುಡುಕಿ ಜನರು ಬರುತ್ತಿದ್ದರು. ರಾಜ್ಯದಲ್ಲಿ ಮತ್ತೆಲ್ಲೂರಾಸಾಯನಿಕ ಮಿಶ್ರಣದ ಜ್ಯೂಸ್ ಮಾರುತ್ತಿರುವ ಸುದ್ದಿ ಕೇಳಿಬಂದಿಲ್ಲ. ಆದ್ದರಿಂದ ಜ್ಯೂಸ್‌ಗೆ ಹಾಕಿರುವ ಈ ರಾಸಾಯನಿಕದಿಂದ ಮಾನವ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಹಾನಿ ಮಾಡಬಹುದೆಂದು ಪ್ರಯೋಗಾಲಯದ ಪರೀಕ್ಷೆಯ ನಂತರವೇ ತಿಳಿಯಲಿದೆ. ಸೇನೆಗೆ ನಾಯೋಗ್ಯವಲ್ಲದ ರಾಸಾಯನಿಕ ಸೂಪರ್‌ಗ್ಲೋದಲ್ಲಿರುವುದು ಎಂದು ಪರಿಶೀಲನೆಗೆ ನೇತೃತ್ವ ನೀಡಿದ್ದ ವಿ.ಕೆ. ಪ್ರದೀಪ್ ತಿಳಿಸಿದ್ದಾರೆನ್ನಲಾಗಿದೆ. ಜ್ಯೂಸ್ ಕುಡಿಯಲು ಈ ಅಂಗಡಿಗೆ ಯುವಕರು ಸಾಲುಗಟ್ಟಿ ಬರುತ್ತಿರುವುದು ಗಮನಕ್ಕೆ ಬಂದಾಗ ಆಹಾರ ಸುರಕ್ಷೆ ಇಲಾಖೆಯ ಪರಿಶೀಲನೆ ಮುಂದಾಗಿತ್ತು. ಯುವಕರ ತಂಡವೊಂದು ಆಹಾರ ಇಲಾಖೆಯ ಗಮನಕ್ಕೆ ತಂದಿದ್ದರು. ಇನ್ನೊಂದು ಅಂಗಡಿಯ ಹಿಂಬದಿಯಲ್ಲಿ ಇರಿಸಲಾದ ಇಲೆಕ್ಟ್ರೊ ಪ್ಲೇಟಿಂಗ್ ರಾಸಾಯನಿಕ ವಸ್ತುವನ್ನು ಜ್ಯೂಸ್‌ಗೆ ಸೇರಿಸಿ ನೀಡಲಾಗುತ್ತಿತ್ತು. ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

 ಮಂಗಳೂರಿನಿಂದ ರಾಸಾಯನಿಕ ತರಲಾಗುತ್ತಿದೆ ಎಂದು ಅಂಗಡಿ ಮಾಲಕ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಐದು ಪ್ಯಾಕೆಟ್ ಇಲೆಕ್ಟ್ರೋ ಪ್ಲೇಟಿಂಗ್ ಪತ್ತೆಯಾಗಿವೆ. ಇದನ್ನು ಮಿಶ್ರಣ ಮಾಡಿದ ಜ್ಯೂಸ್ ವಶ ಪಡಿಸಿಕೊಂಡ ನಂತರ ಅಂಗಡಿಗೆ ಬೀಗ ಹಾಕಲಾಯಿತು. ವಶಪಡಿಸಿದ ಜ್ಯೂಸನ್ನು ಲ್ಯಾಬ್ ಪರಿಶೀಲನೆ ವರದಿಯ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.

ಈ ರೀತಿ ತಂಪುಪಾನೀಯಗಳಿಗೆ ಮಿಶ್ರಣ ಮಾಡುವ ಘಟನೆ ಕೇವಲ ಇದೊಂದೇ ಅಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕೆಲವುಜ್ಯೂಸ್ ಅಂಗಡಿಗಳು ನ್ಯೂಜನರೇಶನ್‌ನ್ನು ಹೆಚ್ಚು ಆಕರ್ಷಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸಂದೇಹಗಳು ಈಗ ಆರಂಭಗೊಂಡಿವೆ. ಇಂತಹ ಅಂಗಡಿಗಳಿಗೂ ದಾಳಿ ನಡೆಸಲಾಗುವುದುಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನ ಕಾಲದವರೆಗೂ ಜ್ಯೂಸ್ ಹೆಚ್ಚು ಸಿಹಿಯಾಗಲಿಕ್ಕೆ ಸಾಕ್ರಿನ್ ಡೆಲ್ಸಿನ್ ಮಿಶ್ರಣಮಾಡಲಾಗುತ್ತಿತ್ತು. ಹುಡಿರೂಪದಲ್ಲಿ ಸಿಗುವ ಇವುಗಳ ಪ್ರಮುಖ ಮಾರಾಟ ಕೇಂದ್ರ ಮಂಗಳೂರಾಗಿದೆ. ಟ್ರೈನ್ ಮೂಲಕ ಇವುಗಳನ್ನು ಕಾಸರಗೋಡು ಕಣ್ಣೂರು ಜಿಲ್ಲೆಗಳಲ್ಲಿ ವಿತರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News