×
Ad

ಡೆಲ್ಲಿ ಡೇರ್ ಡೆವಿಲ್ಸ್‌ಗೆ ದ್ರಾವಿಡ್ ಸಲಹೆಗಾರ

Update: 2016-03-01 23:50 IST

  ಹೊಸದಿಲ್ಲಿ. ಮಾ.1: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಐಪಿಎಲ್‌ನ ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿಯ ಸಲಹೆಗಾರನಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕದ ಪ್ಯಾಡಿ ಅಪ್ಟನ್ ತಂಡದ ಪ್ರಧಾನ ಕೋಚ್ ಆಗಿಯೂ, ಮುಂಬೈ ತಂಡದ ಮಾಜಿ ರಣಜಿ ಆರಂಭಿಕ ಆಟಗಾರ ಝುಬಿನ್ ಭರುಚಾ ತಂಡದ ತಾಂತ್ರಿಕ ನಿರ್ದೇಶಕರಾಗಿಯೂ ಆಯ್ಕೆಯಾಗಿದ್ದಾರೆ.

ಹೊಸಬರನ್ನು ಒಳಗೊಂಡಿರುವ ಡೆಲ್ಲಿ ತಂಡದ ಸಪೋರ್ಟ್ ಸ್ಟಾಫ್ ಸೋಮವಾರದಿಂದ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರವು ಗುರ್ಗಾಂವ್‌ನ ಟಿಇಆರ್‌ಐ ಮೈದಾನದಲ್ಲಿ ಮಾ.4ರ ತನಕ ನಡೆಯಲಿದೆ.

ದ್ರಾವಿಡ್, ಅಪ್ಟನ್ ಹಾಗೂ ಭರುಚಾರನ್ನು ಡೆಲ್ಲಿ ತಂಡಕ್ಕೆ ಸ್ವಾಗತಿಸಿರುವ ಡೆಲ್ಲಿಯ ಬ್ಯುಸಿನೆಸ್ ಚೇರ್‌ಮನ್ ಕಿರಣ್ ಕುಮಾರ್ ಗಾಂಧಿ, ಈ ಮೂವರು ತಂಡದ ಯುವ ಆಟಗಾರರ ಮೇಲೆ ಪ್ರಭಾವಬೀರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ಡೆಲ್ಲಿ ತಂಡದಲ್ಲಿ ದ್ರಾವಿಡ್ ಸಲಹೆಗಾರರಾಗಿ ಆಯ್ಕೆಯಾಗಿದ್ದು ನಮ್ಮ ಭಾಗ್ಯ. ಇದೀಗ ಅವರು ಭಾರತ ಎ ಹಾಗೂ ಅಂಡರ್-19 ತಂಡಗಳ ಕೋಚ್ ಆಗಿದ್ದಾರೆ. ಡೆಲ್ಲಿ ತಂಡದಲ್ಲಿ ಅವರು ಹೊಸ ಪಾತ್ರದಲ್ಲಿ ತಂಡದ ಮೇಲೆ ಪ್ರಭಾವ ಬೀರಲಿದ್ದಾರೆ ಎಂದು ಗಾಂಧಿ ತಿಳಿಸಿದರು.

ದ್ರಾವಿಡ್, ಅಪ್ಟನ್ ಹಾಗೂ ಭರುಚಾ ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಈ ಮೂವರು ಮತ್ತೆ ಒಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News