×
Ad

ಟ್ವೆಂಟಿ-20 ವಿಶ್ವಕಪ್: ಪಾಕ್ ತಂಡಕ್ಕೆ ಶೆಹಝಾದ್ ವಾಪಸ್

Update: 2016-03-07 23:33 IST

ಕರಾಚಿ, ಮಾ.7: ಭಾರತದಲ್ಲಿ ಮಂಗಳವಾರ(ಮಾ.8) ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡಕ್ಕೆ ಆರಂಭಿಕ ದಾಂಡಿಗ ಅಹ್ಮದ್ ಶೆಹಝಾದ್ ವಾಪಸಾಗಿದ್ದಾರೆೆ. ಶೆಹಝಾದ್ ಬಾಂಗ್ಲಾದೇಶದಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಪಾಕ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

 ಏಷ್ಯಾಕಪ್‌ನಲ್ಲಿ ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದ ಖುರ್ರಮ್ ಮಂಝೂರ್ ಬದಲಿಗೆ ಶೆಹಝಾದ್ ಆಯ್ಕೆಯಾಗಿದ್ದಾರೆ. ಶೆಹಝಾದ್ ಈ ವರ್ಷದ ಜನವರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಆಡಿದ್ದರು. 40 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶೆಹಝಾದ್ 941 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ ಔಟಾಗದೆ 101 ರನ್ ಗಳಿಸಿದ್ದು, 4 ಅರ್ಧಶತಕ ಬಾರಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಅಫ್ರಿದಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರೂ ನಾಯಕತ್ವ ಉಳಿಸಿಕೊಂಡಿದ್ದಾರೆ. ಏಷ್ಯಾಕಪ್ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ಮುಹಮ್ಮದ್ ಹಫೀಝ್ ತಂಡದಲ್ಲಿ ಸ್ಥಾನ ಪಲ್ಲಟವಾಗಿಲ್ಲ.

ಪಾಕಿಸ್ತಾನ ತಂಡ: ಶಾಹಿದ್ ಅಫ್ರಿದಿ(ನಾಯಕ), ಶುಐಬ್ ಮಲಿಕ್, ಸರ್ಫರಾಝ್ ಅಹ್ಮದ್(ಉಪ ನಾಯಕ), ಮುಹಮ್ಮದ್ ಹಫೀಝ್, ಉಮರ್ ಅಕ್ಮಲ್, ಅಹ್ಮದ್ ಶೆಹಝಾದ್, ಶಾರ್ಜೀಲ್ ಖಾನ್, ಮುಹಮ್ಮದ್ ನವಾಝ್, ಇಮ್ಮಾದ್ ವಸೀಂ, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ಮುಹಮ್ಮದ್ ಆಮಿರ್, ವಹಾಬ್ ರಿಯಾಝ್,ಮುಹಮ್ಮದ್ ಸಮಿ, ಖಾಲಿದ್ ಲತೀಫ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News