×
Ad

ಪ್ರಧಾನ ಮಂತ್ರಿ ಕಚೇರಿಯ ನಕಲಿ 'ರಾ’ ಅಧಿಕಾರಿ ಬಂಧನ!

Update: 2016-03-09 14:46 IST

ವಾರಣಾಸಿ, ಮಾ. 9: ಪ್ರಧಾನಮಂತ್ರಿ ನರೇಂದ್ರ ಮೋದಿಯ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ತಾನು ದಿಲ್ಲಿಯ ಪ್ರಧಾನಿ ಕಚೇರಿಯ ಹಿರಿಯ 'ರಾ' ಪೊಲೀಸಧಿಕಾರಿ (ಎಸ್‌ಎಸ್‌ಪಿ) ಎಂದು ಹೇಳಿಕೊಂಡು ಪೊಲೀಸರಿಂದ ಹಣ ಸಂಗ್ರಹಿಸುತ್ತಿದ್ದನೆನ್ನಲಾಗಿದೆ.

ಪೊಲೀಸ್ ವಕ್ತಾರರು ಮಂಡು ಆಡಿಹ್ ಕ್ಷೇತ್ರದ ಕಂದ್ವಾ ಕರ್ಮದೇಶ್ವರ ಮಂದಿರದಲ್ಲಿ ಅನಘ್ ಪಾಂಡೆ ಎಂಬಾತನನ್ನು  ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದೇ ಠಾಣೆಯ ಚಿತಿಪುರ ಮೀರಾನಗರದ ನಿವಾಸಿ ಅನಘ್ ನಿನ್ನೆ ಮಂದಿರದಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿದ್ದ ಪೊಲೀಸ್ ಸಿಬ್ಬಂದಿಗೆ ತನ್ನ ನಕಲಿ ಪರಿಚಯ ಪತ್ರ ತೋರಿಸಿ ಹಣ ಕಲೆ ಹಾಕುತ್ತಿದ್ದನೆಂದು ಅವರು ಹೇಳಿದ್ದಾರೆ.

ಬಂಧಿಸಿ ವಿಚಾರಣೆ ನಡೆಸಿದಾಗ ಅವನಲ್ಲಿದ್ದ ಇನ್ನೆರಡು ನಕಲಿ ಪರಿಚಯ ಪತ್ರಗಳು ಪತ್ತೆಯಾಗಿವೆ. ಮೂರು ಪರಿಚಯ ಪತ್ರವನ್ನು ನಕಲಿ ರೀತಿಯಲ್ಲಿ ಮಾಡಿಸಿಕೊಂಡಿದ್ದನೆಂದು ಪೊಲೀಸರೊಂದಿಗೆ ಒಪ್ಪಿಕೊಂಡಿದ್ದಾನೆ. ಅವನಲ್ಲಿ ಯೂನಿವರ್ಸಲ್ ನ್ಯೂ ಏಜೆನ್ಸಿ ಮತ್ತು ಉತ್ತರ ಪ್ರದೇಶ ಅಪರಾಧ ತಡೆ ಸಮಿತಿ ಲಕ್ನೊ ಇದರ ಪರಿಚಯ ಪತ್ರಗಳಿದ್ದವು. ಪೊಲೀಸರು ಅವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News