×
Ad

ಹಿಮಾಚಲದ ಮುಖ್ಯಮಂತ್ರಿಯನ್ನು ಗಲ್ಲಿಗೇರಿಸುವಿರಾ?, ಬಿಜೆಪಿಗೆ ಶಿವಸೇನೆಯ ಪ್ರಶ್ನೆ

Update: 2016-03-09 18:35 IST

ಮುಂಬೈ, ಮಾರ್ಚ್.9: ಭಾರತ ಪಾಕಿಸ್ತಾನ ನಡುವೆ ಪ್ರಸ್ತಾವಿತ ಟಿ-20ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್ ಪಂದ್ಯದ ಕುರಿತು ಬಿಜೆಪಿಗರಿಂದ ವ್ಯಕ್ತವಾಗುತ್ತಿರುವ ಆಕ್ರೋಶದ ವಿರುದ್ಧ ಎಚ್ಚರಿಕೆ ನೀಡಿರುವ ಶಿವಸೇನೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್‌ರನ್ನು ದೇಶದ್ರೋಹಿ ಎಂದು ಘೋಷಿಸುವಿರಾ ಎಂದು ಪ್ರಶ್ನಿಸಿದೆ.

ಪಾರ್ಟಿ ತನ್ನ ಮುಖಪತ್ರ ಸಾಮ್ನಾದಲ್ಲಿ ವೀರಭದ್ರಸಿಂಗ್ ತನ್ನ ರಾಜ್ಯದಲ್ಲಿ ನಡೆಯುತ್ತಿರುವ ಕ್ರಿಕೆಟ್‌ನ್ನು ವಿರೋಧಿಸಿದ್ದಾರೆ. ಇದು ರಾಜಕೀಯ ಅಥವಾ ಧಾರ್ಮಿಕ ವಿರೋಧವಲ್ಲ. ಬದಲಾಗಿ ದೇಶಕ್ಕಾಗಿರುವ ವಿರೋಧವಾಗಿದೆ. ಯಾಕೆಂದರೆ ಮೃತ ಜವಾನರ ಕುಟುಂಬ ಅಲ್ಲಿ ವಾಸಿಸುತ್ತಿವೆ ಎಂದು ಬಿಜೆಪಿಯ ನಿಲುವನ್ನು ಶಿವಸೇನೆ ಟೀಕಿಸಿದೆ. ಒಂದುವೇಳೆ ಪಂದ್ಯ ಆಯೋಜಿಸುವುದು ಹುತಾತ್ಮ ಯೋಧರ ಅಪಮಾನವೆಂದು ಸಿಂಗ್‌ರಿಗೆ ಅನಿಸಿದರೆ ನೀವು ಅವರನ್ನು ದೇಶದ್ರೋಹಿ ಎಂದು ಘೋಷಿಸುವಿರಾ? ಈ ಅಪರಾಧಕ್ಕಾಗಿ ಅವರಿಗೆ ಗಲ್ಲು ಶಿಕ್ಷೆ ನೀಡುವಿರಾ? ಎಂದು ಸಾಮ್ನಾ ಬಿಜೆಪಿಯನ್ನು ಪ್ರಶ್ನಿಸಿದೆ. ಪಠಾಣ್ ಕೋಟ್ ಭಯೋತ್ಪಾದನಾ ದಾಳಿಯ ನಂತರ ಜನರ ಭಾವನೆಯನ್ನು ಗೌರವಿಸಿ ಪಂದ್ಯವನ್ನು ಸ್ಥಳಾಂತರಿಸಬೇಕೆಂದು ವೀರಭದ್ರ ಸಿಂಗ್ ಹೇಳಿದ್ದರು. ರಾಜ್ಯಸರಕಾರಕ್ಕೆ ಆಟಗಾರರ ಭದ್ರತೆಯನ್ನು ಖಚಿತ ಪಡಿಸಲು ಸಾಧ್ಯವಿಲ್ಲ ಮತ್ತು ಭಾರತದ ಭೂಮಿಗೆ ಪಾಕಿಸ್ತಾನಿ ಆಟಗಾರರನ್ನು ಸ್ವಾಗತಿಸುವುದು ಹುತಾತ್ಮ ಯೋಧರ ಅಪಮಾನವಾದೀತು ಎಂದೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News