ಬಿಹಾರ:ಮಹಾದಲಿತರ 125 ಗುಡಿಸಲುಗಳು ಬೆಂಕಿಗೆ ಆಹುತಿ
Update: 2016-03-09 18:59 IST
ನವಾಡಾ,ಮಾ.9: ನವಾಡಾ ಜಿಲ್ಲೆಯ ಕಛಿಯಾ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಮಹಾದಲಿತ ಕುಟುಂಬಗಳಿಗೆ ಸೇರಿದ ಸುಮಾರು 125 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.
ಈ ಅವಘಡದಿಂದಾಗಿ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಘಟನೆಗೆ ಕಾರಣವನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ತನ್ಮಧ್ಯೆ ತಮ್ಮನ್ನು ದ್ವೇಷಿಸುತ್ತಿರುವ ಕೆಲವು ಅಪರಿಚಿತ ಗ್ರಾಮಸ್ಥರು ತಮ್ಮ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸಂತಸ್ತ ಕುಟುಂಬಗಳು ಆರೋಪಿಸಿವೆ.