×
Ad

ಉತ್ತರಾಖಂಡ: ಬಲಾಬಲ ಪರೀಕ್ಷೆಗೆ ಹೈಕೋರ್ಟ್ ತಡೆ

Update: 2016-03-30 23:59 IST

ಎ.6ಕ್ಕೆ ವಿಚಾರಣೆ ಮುಂದೂಡಿಕೆ

ನೈನಿತಾಲ್, ಮಾ.30: ಉತ್ತರಾಖಂಡ ವಿಧಾನಸಭೆಯಲ್ಲಿ ಮಾ.31ರಂದು ಬಲಾಬಲ ಪರೀಕ್ಷೆ ನಡೆಸುವಂತೆ ಉತ್ತರಾಖಂಡ ಹೈಕೋರ್ಟ್‌ನ ಏಕ ಸದಸ್ಯ ಪೀಠ ನಿನ್ನೆ ನೀಡಿದ್ದ ಆದೇಶಕ್ಕೆ ಅದೇ ನ್ಯಾಯಾಲಯದ ವಿಭಾಗೀಯ ಪೀಠವೊಂದು ಬುಧವಾರ ತಡೆಯಾಜ್ಞೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ಅದು ಎ.6ಕ್ಕೆ ಮುಂದೂಡಿದೆ. ಮಾರ್ಚ್ 31ಕ್ಕೆ ನಿಗದಿಯಾಗಿರುವ ಬಲ ಪರೀಕ್ಷೆಗೆ ತಡೆಯಾಜ್ಞೆ ನೀಡುವ ವೇಳೆ ಹಲವು ಕಾನೂನು ವಿಚಾರಗಳನ್ನು ಪರಿಗಣಿಸಬೇಕಾಗಿದೆಯೆಂದು ನ್ಯಾಯಪೀಠ ಅಭಿಪ್ರಾಯಿಸಿದೆ.

ಕೇಂದ್ರ ಸರಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿ, ಬಹುಮತ ಪರೀಕ್ಷೆಗೆ ನಿರ್ದೇಶನ ನೀಡಿದ್ದ ನ್ಯಾಯಾಲಯದ ಮಂಗಳವಾರದ ಆದೇಶವು ರಾಷ್ಟ್ರಪತಿ ಅಧ್ಯಾದೇಶ ವನ್ನು ಅಮಾನತುಗೊಳಿಸಿದುದಕ್ಕೆ ಸಮವಾಗಿದೆ. ಅಲ್ಲಿ ಸರಕಾರವೇ ಇಲ್ಲದ ಮೇಲೆ ಬಲಾಬಲ ಪರೀಕ್ಷೆಯಿಂದ ಯಾವುದೇ ಉದ್ದೇಶ ಈಡೇರದು. ಆದುದರಿಂದ ಬಹುಮತ ಸಾಬೀತು ಆದೇಶವನ್ನು ಮೂರು ದಿನಗಳ ಕಾಲ ಅಮಾನತುಗೊಳಿಸಿ ಮುಂದಿನ ವಾರ ವಿಷಯದ ಸಂಪೂರ್ಣ ವಿಚಾರಣೆ ನಡೆಸಬೇಕೆಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News