ಭಾರತಕ್ಕೆ ಹೋಲಿಸಿದರೆ ನಮ್ಮ ಪರಮಾಣು ಅಸ್ತ್ರಗಳು ಸರಳ : ಪಾಕಿಸ್ತಾನ ಹೇಳಿಕೆ

Update: 2016-04-01 14:16 GMT

ವಾಶಿಂಗ್ಟನ್, ಎ.1: ಪಾಕಿಸ್ತಾನದ ಪರಮಾಣು ಅಸ್ತ್ರಗಳ ಸುರಕ್ಷತೆಯ ಬಗ್ಗೆ ಜಾಗತಿಕ ಕಳವಳ ವ್ಯಕ್ತವಾಗಿರುವಂತೆಯೇ, ತನ್ನ ಪರಮಾಣು ಅಸ್ತ್ರಗಳು ಸುರಕ್ಷಿತವಾಗಿವೆ ಎಂಬುದಾಗಿ ಆ ದೇಶ ಹೇಳಿಕೊಂಡಿದೆ. ತನ್ನ ಪರಮಾಣು ಕಾರ್ಯಕ್ರಮ ಸರಳವಾಗಿದೆ, ಭಾರತದಂತಲ್ಲ ಎಂದು ಅದು ಪ್ರತಿಪಾದಿಸಿದೆ.

ಹೀಗೆ ಹೇಳಿದವರು ಪರಮಾಣು ಭದ್ರತಾ ಶೃಂಗಸಮ್ಮೇಳನದಲ್ಲಿ ಭಾಗವಹಿಸಲು ವಾಶಿಂಗ್ಟನ್‌ಗೆ ಆಗಮಿಸಿರುವ ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ಐಝಾಝ್ ಚೌಧರಿ.

ಜಗತ್ತಿನಾದ್ಯಂತ 2,734 ಪರಮಾಣು ಸಂಬಂಧಿ ಘಟನೆಗಳು ನಡೆದಿವೆ ಎಂಬುದಾಗಿ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ವರದಿ ಮಾಡಿದೆ. ಈ ಪೈಕಿ ಐದು ಘಟನೆಗಳು ಭಾರತದಲ್ಲಿ ನಡೆದಿವೆ. ಆದರೆ, ‘‘ನಮ್ಮ ಪರಮಾಣು ಕಾರ್ಯಕ್ರಮಕ್ಕೆ 40 ವರ್ಷ ತುಂಬಿದರೂ’’, ಪಾಕಿಸ್ತಾನದಲ್ಲಿ ಒಂದೇ ಒಂದು ಅಪಘಾತ ಅಥವಾ ಉಲ್ಲಂಘನೆ ನಡೆದಿಲ್ಲ ಎಂದು ಐಝಾಝ್ ಚೌಧರಿ ನುಡಿದರು.

‘‘ಪಾಕಿಸ್ತಾನದ ಪರಮಾಣು ಸಂಸ್ಥಾಪನೆಗಳು ಸುಭದ್ರವಾಗಿವೆ ಮಾತ್ರವಲ್ಲ, ಅವುಗಳು ಸುಭದ್ರವಾಗಿವೆ ಎನ್ನುವುದನ್ನು ಜಗತ್ತೂ ಮಾನ್ಯ ಮಾಡಿದೆ. ಅವುಗಳ ಭದ್ರತೆಗಾಗಿ ಪಾಕಿಸ್ತಾನ ಕಠಿಣ ಪರಿಶ್ರಮಪಟ್ಟಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News