×
Ad

ಯುವತಿಯೊಬ್ಬಳನ್ನು ಕಚೇರಿಯಂದ ಎಳೆದೊಯ್ದು ಅತ್ಯಾಚಾರ ನಡೆಸಿದ ಭೂಪ... !

Update: 2016-04-23 14:05 IST

ಮುಕ್ತಸರ, ಎ.23: ಪಂಜಾಬ್ ನ ಮುಕ್ತಸರ ಎಂಬಲ್ಲಿ ದಲಿತ ಯುವತಿಯೊಬ್ಬಳನ್ನು ಹಾಡುಹಗಲೇ  ಕಚೇರಿಯಂದ ಎಳೆದೊಯ್ದು ಅನಂತರ ಅತ್ಯಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ.24ರಂದು ಇಪ್ಪತ್ತನಾಲ್ಕರ ಯುವತಿಯನ್ನು ಗುರಿಂದರ್‌ ಸಿಂಗ್‌ ಎಂಬಾತನು  ಕಚೇರಿಯಿಂದ ಎಳೆದೊಯ್ದು ಅನಂತರ ಫಾರ್ಮ್‌ ಹೌಸ್‌ನಲ್ಲಿ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿತ್ತು.
ಗುರಿಂದರ್‌ ಸಿಂಗ್‌ ಯುವತಿಯನ್ನು ಕರೆದೊಯ್ಯುವ  ದೃಶ್ಯ ಪಕ್ಕದ ಅಂಗಡಿಯೊಂದರ ಸಿಟಿವಿಯಲ್ಲಿ ದಾಖಲಾಗಿದೆ. ಈ ಘಟನೆ ನಡೆದ ಐದು ದಿನಗಳ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಂತ್ರಸ್ತೆ  ಮತ್ತು ಆರೋಪಿಯು ಗ್ರಾಮದವರಾಗಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ತಡ ಮಾಡಿರುವ ಹಿನ್ನೆಲೆಯಲ್ಲಿ ಯುವತಿಯ ಹೆತ್ತವರು ಪರಿಶಿಷ್ಟ  ಜಾತಿ ಸಮುದಾಯದ  ರಕ್ಷಣೆಗಾಗಿ  ಇರುವ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದರು.ಶನಿವಾರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News