×
Ad

ಒಡಿಶಾ ಮುಖ್ಯಮಂತ್ರಿ ಕಚೇರಿಯಲ್ಲಿ ಬೆಂಕಿ

Update: 2016-04-27 23:46 IST

ಭುವನೇಶ್ವರ, ಎ.27: ಒಡಿಶಾ ವಿಧಾನ ಸಭೆಯಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರ ಕಚೇರಿಯಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಕೊಠಡಿಯಲ್ಲಿದ್ದ ಟಿವಿ ಹಾಗೂ ಸೆಟಪ್ ಬಾಕ್ಸ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನ ಬಳಿಕ ಈ ಬೆಂಕಿ ಕಾಣಿಸಿಕೊಂಡಿದೆಯೆಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ವಿಧಾನ ಸಭೆಯ ಕಲಾಪ ನಡೆಯುತ್ತಿದೆ. ಆದರೆ, ಮುಖ್ಯಮಂತ್ರಿ ದಿಲ್ಲಿಗೆ ಹೋಗಿದ್ದರೆಂದು ವಿಧಾನಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 12:20ರ ವೇಳೆ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅಧಿಕಾರಿಗಳು ಅಗ್ನಿ ಶಾಮಕ ದಳವನ್ನು ಎಚ್ಚರಿಸಿದರು. ಅವರು ಕೇವಲ 20 ನಿಮಿಷಗಳಲ್ಲಿ ಬೆಂಕಿ ಆರಿಸಿದರು.
ಟಿವಿ ಹಾಗೂ ಸೆಟಪ್ ಬಾಕ್ಸ್‌ನ ಹೊರತು ಕಚೇರಿಯ ಯಾವುದೇ ಆಸ್ತಿಗೆ ಹಾನಿಯಾಗಿಲ್ಲವೆಂದು ಅಗ್ನಿ ಶಾಮಕ ಅಧಿಕಾರಿ ಮನೋರಂಜನ್ ರಾವುತ್ ತಿಳಿಸಿದ್ದಾರೆ.
 ಒಡಿಶಾದ ಪೊಲೀಸ್ ಮಹಾ ನಿರ್ದೇಶಕ ಕೆ.ಬಿ.ಸಿಂಗ್, ಭುವನೇಶ್ವರದ ಪೊಲೀಸ್ ಆಯುಕ್ತ ವೈ.ಬಿ.ಖುರಾನಿಯಾ ಹಾಗೂ ಉಪ ಆಯುಕ್ತ ಸತ್ಯವ್ರತ ಭೋಯಿ ಸ್ಥಳಕ್ಕೆ ಧಾವಿಸಿ, ಬೆಂಕಿಗೆ ಕಾರಣ ಖಚಿತಪಡಿಸಲು ತನಿಖೆ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ನಿರಂಜನ್ ಪೂಜಾರಿ, ಇದೊಂದು ಸಣ್ಣ ಘಟನೆಯಾಗಿದ್ದು, ಚಿಂತೆಗೆ ಕಾರಣವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News