×
Ad

ಮೊದಲು ಬರ ಮುಕ್ತವಾಗಲಿ ಆಗ ದೇಶ ಕಾಂಗ್ರೆಸ್ ಮುಕ್ತವಾಗುತ್ತದೆ: ಶಿವಸೇನೆ

Update: 2016-04-28 15:32 IST

ಮುಂಬೈ, ಎಪ್ರಿಲ್ 28: ಶಿವಸೇನೆ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್‌ರಾವುತ್‌ರ ಈ ಹೇಳಿಕೆಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಎಲ್ಲಯವರೆಗೆ ದೇಶ ಬರಮುಕ್ತವಾಗುವುದಿಲ್ಲವೋ ಅಲ್ಲಿಯವರೆಗೆ ಕಾಂಗ್ರೆಸ್ ಮುಕ್ತಭಾರತ ಎಂಬುದಕ್ಕೆ ಯಾವುದೇ ಮಹತ್ವ ಇಲ್ಲ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

"ನೀವು -(ಮೋದಿಜಿ) ಬರ ಮುಕ್ತಭಾರತ ಮಾಡಿರಿ,ತನ್ನಿಂದತಾನೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಆಗಲಿದೆ. ಬರ 50ವರ್ಷಗಳ ಕೊಡುಗೆಯಾಗಿದೆ" ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಕೆಲವುದಿನಗಳ ಮೊದಲು ಶಿವಸೇನೆ ತನ್ನ ಮುಖಪತ್ರಿಕೆ ಸಾಮ್ನಾದಲ್ಲಿ ಬರ ವಿಚಾರದಲ್ಲಿ ಮಹಾರಾಷ್ಟ್ರದ ಬಿಜೆಪಿ ಸರಕಾರವನ್ನು ಟೀಕಿಸಿತ್ತು. ಅದು ಬಿಯರ್ ಪ್ಯಾಕ್ಟರಿಗಳಿಗೆ ನೀಡುವ ನೀರನ್ನು ಬರಗ್ರಸ್ತ ಪ್ರದೇಶಗಳಿಗೆ ಯಾಕೆ ನೀಡಲಾಗುವುದಿಲ್ಲ ಎಂದು ಪ್ರಶ್ನಿಸಿತ್ತು.

ಸಂಜಯ ರಾವುತ್‌ರ ಈ ಹೇಳಿಕೆ ಟ್ವಿಟರ್‌ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ರಾಕೇಶ್ ವಾಸ್ವಾಡ ಎಂಬವರು ಟ್ವೀಟ್ ಮಾಡಿ ಸಂಜಯ್  ಹೇಳಿರುವುದು ನಿಜ.ಎಲ್ಲಿಯವರೆಗೆ ಮೇಲ್ವರ್ಗ ಕೆಳವರ್ಗ ರಾಜಕೀಯ ಮಾಡುತ್ತ ಇರವುದು? ಸ್ವಾತಂತ್ರ್ಯದ ನಂತರ ದಿಂದ ಈವರೆಗೂ ಬರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓರ್ವ ಯೂಸರ್ ಸಂಜಯ್ ರಾವುತ್ ಮತ್ತು ಉದ್ಧವ್ ಠಾಕ್ರೆಯವರ ಹೇಳಿಕೆಗಳು ಪ್ರಸಕ್ತ ಸ್ಥಿತಿಗತಿಯನ್ನು ಬಹಿರಂಗಪಡಿಸಲು ಎಷ್ಟೂ ಸಾಕು ಎಂದು ಹೇಳಿದ್ದಾರೆ.ಹೀಗೆ ಹಲವಾರು ಮಂದಿ ಟ್ವೀಟ್ ಮಾಡಿ ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News