ರಾಜಿಗೆ ಮುನ್ನ ಇಬಿಸಿ ಮೀಸಲಾತಿ ಅಧ್ಯಯನ: ಹಾರ್ದಿಕ್ ಪಟೇಲ್
Update: 2016-05-01 00:02 IST
ಅಹ್ಮದಾಬಾದ್,ಎ.30: ಗುಜರಾತ್ ಸರಕಾರವು ಪ್ರಕಟಿಸಿರುವ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ (ಇಬಿಸಿ) ಶೇ.10 ಮೀಸಲಾತಿಯನ್ನು ಅಧ್ಯಯನ ಮಾಡಿದ ಬಳಿಕವೇ ಕೋಟಾ ಕುರಿತು ಬಿಕ್ಕಟ್ಟನ್ನು ಅಂತ್ಯಗೊಳಿಸಲು ರಾಜಿಯ ಬಗ್ಗೆ ತಾನು ಯೋಚಿಸುವುದಾಗಿ ದೇಶದ್ರೋಹ ಆರೋಪದಲ್ಲಿ ಜೈಲು ಸೇರಿರುವ ಪಾಟಿದಾರ ಮೀಸಲು ಚಳವಳಿಯ ನಾಯಕ ಹಾರ್ದಿಕ ಪಟೇಲ್ ಶನಿವಾರ ಇಲ್ಲಿ ತಿಳಿಸಿದರು. ಆದರೆ ಸರಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿರುವ ಸಮುದಾಯದ ನಾಯಕರು ಪ್ರತಿಭಟನೆಗೆ ಅಂತ್ಯ ಹಾಡಲು ಒಲವು ವ್ಯಕ್ತಪಡಿಸಿದ್ದು, ತಮ್ಮ ಎರಡು ಮುಖ್ಯವಾದ ಬೇಡಿಕೆಗಳು ಈಡೇರಿವೆ ಎಂದು ಹೇಳಿದ್ದಾರೆ.