×
Ad

ಇಂದು ಪ್ರಧಾನಿ ವಾರಣಾಸಿಗೆ ಇ-ದೋಣಿಗೆ ಚಾಲನೆ-ಇ-ರಿಕ್ಷಾ ವಿತರಣೆ

Update: 2016-05-01 00:03 IST

ವಾರಣಾಸಿ, ಎ.30: ಪ್ರಧಾನಿ ನರೇಂದ್ರ ಮೋದಿ ನಾಳೆ ಅವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಅವರಲ್ಲಿ ಗಂಗಾ ನದಿಯಲ್ಲಿ ಸಂಚರಿಸಲು ಸೌರ ಶಕ್ತಿಯ ದೋಣಿಗಳಿಗೆ ಚಾಲನೆ ನೀಡಲಿದ್ದು, ಒಂದು ಸಾವಿರ ಇ-ರಿಕ್ಷಾಗಳನ್ನು ವಿತರಿಸಲಿದ್ದಾರೆ.

ಹೊಸದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ಬಾಬತ್‌ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ಅಲ್ಲಿಂದ ಪೂರ್ವ ಉತ್ತರ ಪ್ರದೇಶದ ಬಲಿಯಾಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಲಿದ್ದಾರೆ. ಬಲಿಯಾದಲ್ಲಿ ಅವರು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ (ಪಿಎಂಯುವೈ)ಚಾಲನೆ ನೀಡಲಿದ್ದಾರೆ.
ದೇಶಾದ್ಯಂತ ಬಡತನದ ರೇಖೆಗಿಂತ ಕೆಳಗಿರುವ ಸುಮಾರು 5 ಕೋಟಿ ಕುಟುಂಬಗಳಿಗೆ ಧರ್ಮಾರ್ಥ ಎಲ್ಪಿಜಿ ಸಂಪರ್ಕ ಒದಗಿಸುವ ಗುರಿಯನ್ನು ಪಿಎಂಯುವೈ ಇರಿಸಿಕೊಂಡಿದೆ.
ಬಲಿಯಾದಿಂದ ವಾರಣಾಸಿಗೆ ಮರಳಲಿರುವ ಮೋದಿ, ಡೀಸೆಲ್ ಲೊಕೊಮೊಟಿವ್ ವರ್ಕ್ಸ್ (ಡಿಎಲ್‌ಡಬ್ಲು) ಮೈದಾನದಲ್ಲಿ ಫಲಾನುಭವಿಗಳಿಗೆ 1 ಸಾವಿರ ಇ-ರಿಕ್ಷಾ ವಿತರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಧಾನಿ, ಸಾಮ್ನೆ ಘಾಟ್ ಪ್ರದೇಶದಲ್ಲಿರುವ ಸಾಂಸ್ಕೃತಿಕ ಅಧ್ಯಯನ ಮತ್ತು ಸಂಶೋಧನ ಕೇಂದ್ರವಾದ ‘ಜ್ಞಾನ ಪ್ರವಾಹಕ್ಕೆ’ ಭೇಟಿ ನೀಡಲಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News