ಟಿವಿ ಶೋಗೆ ಮರಳಿದ ಕಪಿಲ್ ಶರ್ಮ: ಸೋನಿ ಟಿವಿಯಲ್ಲಿ ಕಪಿಲ್ ಕಮಾಲ್!
ಮುಂಬೈ, ಮೆ. 1: ಪ್ರೇಕ್ಷಕರ ನಿರೀಕ್ಷೆಯ ಸಮಯ ಮುಗಿಯಿತು. ಸೋನಿ ಟಿವಿಗೆ ಕಾಮೆಡಿಯನ್ ಕಪಿಲ್ ಶರ್ಮ ಬಂದಿದ್ದಾರೆ. ಆದರೆ ಈಸಲ ನಿರೀಕ್ಷಿಸಿದಷ್ಟು ಪ್ರೇಕ್ಷರ ಪ್ರತಿಕ್ರಿಯೆ ಇಲ್ಲ. ಸೋಶಿಯಲ್ ಮೀಡಿಯದಲ್ಲಿ ಒಬ್ಬ ಕಲರ್ಸ್ ಚ್ಯಾನೆಲ್ ಕಾರ್ಯಕ್ರಮದ ಎಕ್ಸೆಂಡ್ ವರ್ಜನ್ ಎಂದು ಹೇಳಿದರೆ ಇನ್ನೊಬ್ಬ ಕಪಿಲ್ ಮತ್ತುತಂಡ ಟೈಪ್ಡ್ ಆಗಿದೆ ಎಂದು ಹೇಳಿದ್ದಾನೆ ಎಂದು ವರದಿ ತಿಳಿಸಿದೆ
ಆದರೆ ಕಪಿಲ್‌ರನ್ನು ಇಷ್ಟಪಡುವವರಿಗೆ ಅವರ ಶೋ ಸಾಂತ್ವನ ನೀಡಿದೆ. ಈ ಮಾತಿಗೆ ಈ ಕಾರ್ಯಕ್ರಮಕ್ಕೆ ಸಿಕ್ಕಿದ ಪ್ರೇಕ್ಷಕರ ಬೆಂಬಲ ಆಧಾರವಾಗಿದೆ. ಟಿಆರ್‌ಪಿಯನ್ನು ಮುಂದಿನ ವಾರ ನೋಡಲಾಗುತ್ತದೆ. ಆದರೆ ಸೋನಿ ಟಿವಿಯ ವೆಬ್‌ಸೈಟ್ ದಿ ಕಪಿಲ್ ಶರ್ಮ ಶೋವನ್ನು ಮೂರು ಲಕ್ಷಮಂದಿ ವೀಕ್ಷಿಸಿದ್ದಾರೆ ಎಂದುತಿಳಿಸಿದೆ.
ಇದರ ಟಿಆರ್‌ಪಿ ಓಟ ನಾಗಿನ್, ಕುಂಕುಮ ಭಾಗ್ಯ ಮತ್ತು ಸಾಥಿಯಾದಂತಹ ಧಾರವಾಹಿಗಳಿಗೆ ಸ್ಪರ್ಧೆ ನೀಡುವಷ್ಟು ಇದೆ ಎನ್ನಲಾಗುತ್ತಿದ್ದು ಗರ್ಲ್ಸ್ ಆನ್ ಟಾಪ್ ಮತ್ತು ರೆಡೀಸ್‌ಗೆ ಹೊಡೆತ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.