ಹಳಿ ತಪ್ಪಿದ ದಿಲ್ಲಿ -ಫೈಝಾಬಾದ್ ಎಕ್ಸ್ಪ್ರೆಸ್ ರೈಲು ಬೋಗಿಗಳ ತೆರವುಗೊಳಿಸುವ ಕಾರ್ಯ ಆರಂಭ
Update: 2016-05-02 10:53 IST
ಹೊಸದಿಲ್ಲಿ, ಮೇ 2:ಉತ್ತರ ಪ್ರದೇಶದ ಹಾಪುರದ ಗುರುಮುಖುಟೇಶ್ವರದ ಬಳಿ ರವಿವಾರ ರಾತ್ರಿ ಹಳ್ಳಿ ತಪ್ಪಿದ ದಿಲ್ಲಿ-ಫೈಝಾಬಾದ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳನ್ನು ರೈಲು ಹಳಿಯಿಂದ ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ.
ದಿಲ್ಲಿಯಿಂದ ಫೈಜಾಬಾದ್ಗೆ ತೆರಳುತ್ತಿದ್ದ ದಿಲ್ಲಿ-ಫೈಝಾಬಾದ್ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ ಪರಿಣಾಮವಾಗಿ 100ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯವಾಗಿತ್ತು..
ಮೊರದಾಬಾದ್ ವಿಭಾಗದ ಗುರುಮುಖುಟೇಶ್ವರ ಮತ್ತು ಖಂದಾದರ್ ಸ್ಟೇಷನ್‌ಗಳ ನಡುವೆ ರೈಲು ಹಾದುಹೋಗುವಾಗ ಈ ದುರ್ಘಟನೆ ನಡೆದಿದೆ.
ಗಾಯಗೊಂಡವರನ್ನು ಮೀರತ್, ಗಾಝಿಯಾಬಾದ್ ಮತ್ತು ಹಾಪುರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.