ಈ ಕುಟುಂಬದ ಎಲ್ಲ ಸದಸ್ಯರಲ್ಲಿ 22,24,25,27ರವರೆಗೂ ಬೆರಳುಗಳು!
ಬೈತೂರ್, ಮೆ 2: ಮಧ್ಯಪ್ರದೇಶದ ಬೈತೂರ್‌ನ ಕಾವ್ಲಾ ಗ್ರಾಮದಲ್ಲಿ ಕುಟುಂಬವೊಂದರ ಎಲ್ಲ ಸದಸ್ಯರ ಕೈ ಮತ್ತು ಕಾಲಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೆರಳುಗಳಿವೆ. ಈ ಕುಟುಂಬದ 23ಸದಸ್ಯರಲ್ಲಿಪ್ರತಿಯೊಬ್ಬರಲ್ಲೂ 22, 25,25,27ರವರೆಗೆ ಬೆರಳುಗಳಿದ್ದು ಅವು ಒಂದಕ್ಕೊಂದು ಅಂಟಿದಂತಿವೆ.. ಇದು ಗ್ರಾಮನಿವಾಸಿಗಳಲ್ಲಿ ಅಚ್ಚರಿಗೆಕಾರಣವಾಗಿದ್ದರೂ. ಕಳೆದ ಮೂರು ತಲೆಮಾರುಗಳಿಂದ ಕೈಕಾಲುಗಳಲ್ಲಿ ಹೆಚ್ಚು ಬೆರಳುಗನ್ನು ಹೊಂದುವ ಸಮಸ್ಯೆ ಈ ಕುಟುಂಬವನ್ನು ಕಾಡುತ್ತಿದೆ ಎಂದು ವರದಿಯಾಗಿದೆ.
ಆದರೆ ಈಜನರು ಇಷ್ಟೆಲ್ಲ ಬೆರಳುಗಳಿರುವುದನ್ನು ತಮ್ಮ ಪಾಲಿಗೆ ಕೆಟ್ಟದ್ದೆಂದು ಭಾವಿಸಿಯೇ ಇಲ್ಲ. ಬದಲಾಗಿ ಇದು ದೇವನ ವರದಾನವೆಂದು ತಿಳಿದುಕೊಂಡಿದ್ದಾರೆ. ಈ ಕುಟುಂಬ ಮಂದಿ ಈ ಹೆಚ್ಚುವರಿ ಬೆರಳುಗಳಿಂದ ತಮಗೆ ಯಾವ ತೊಂದರೆಯೂ ಆಗಿಲ್ಲ ಎಂದು ಹೇಳುತ್ತಾರೆ. ಕುಟುಂಬದ ಹೆಣ್ಣು ಮಕ್ಕಳ ವಿವಾಹ ಮಾಡಿಸಲಿಕ್ಕೂ ಯಾವುದೇ ಕಷ್ಟವಾಗಿಲ್ಲ ಎಂದು ಕುಟುಂಬದ ಮುಖ್ಯಸ್ಥ ಹೇಳಿದ್ದಾನೆ. ಇಲ್ಲಿನ ಜನರು ಹೆಚ್ಚು ಬೆರಳುಗಳನ್ನು ಹೊಂದಿದವರನ್ನು ಅದೃಷ್ಟವಂತರು ಎಂದು ಭಾವಿಸುತ್ತಾರೆ. ಆದ್ದರಿಂದ ಅವರಿಗೆ ಹೆಣ್ಣು ಮಕ್ಕಳ ವಿವಾಹ ನಡೆಸಲು ಯಾವುದೇ ಸಮಸ್ಯೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.