×
Ad

ಹಿರಿಯ ಆರೆಸ್ಸೆಸ್ ನಾಯಕ ಬಲರಾಜ ಮಧೋಕ್ ನಿಧನ

Update: 2016-05-02 23:52 IST

ಹೊಸದಿಲ್ಲಿ,ಮೇ 2: ಹಿರಿಯ ಆರೆಸ್ಸೆಸ್ ನಾಯಕ ಹಾಗೂ ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ಬಲರಾಜ ಮಧೋಕ್(96) ಅವರು ಕೆಲವು ದಿನಗಳ ಅಸ್ವಸ್ಥತೆಯ ಬಳಿಕ ಸೋಮವಾರ ಬೆಳಿಗ್ಗೆ ಇಲ್ಲಿಯ ನ್ಯೂ ರಾಜೇಂದ್ರ ನಗರದ ತನ್ನ ನಿವಾಸದಲ್ಲಿ ನಿಧನರಾದರು.
ಮಧೋಕ್ 1920,ಫೆ.25ರಂದು ಜಮ್ಮು-ಕಾಶ್ಮೀರದ ಸ್ಕರ್ಡು ಪ್ರದೇಶದಲ್ಲಿ ಜನಿಸಿದ್ದರು. ಅದೀಗ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿದೆ.
1951ರಲ್ಲಿ ಎಬಿವಿಪಿಯನ್ನು ಹುಟ್ಟುಹಾಕಿದ್ದ ಅವರು, 1961ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಮಧೋಕ್ ನಿಧನದಿಂದ ಭಾರತವು ಮಹಾನ್ ಬುದ್ಧಿಜೀವಿ,ಚಿಂತಕ ಹಾಗೂ ಸಮಾಜ ಸುಧಾರಕನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌ಅವರು ಟ್ವೀಟಿಸಿದ್ದಾರೆ.
ಸಂಜೆ ಇಲ್ಲಿಯ ಸತ್ಯನಗರ ಚಿತಾಗಾರದಲ್ಲಿ ಮಧೋಕ್ ಅವರ ಅಂತ್ಯಸಂಸ್ಕಾರ ನೆರವೇರಿತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News