ಈ ಎಲ್ಲ ಲಾಭಗಳಿಗಾಗಿ ನೀವು ಓದಿರಿ

Update: 2016-05-03 07:31 GMT

ಓದುವುದರಿಂದ ಮಾತಿನಲ್ಲಿ ಬಣ್ಣಿಸಲಾಗದ ಲಾಭವನ್ನು ಪಡೆದುಕೊಳ್ಳಬಹುದು. ಓದುವುದು ನಿಮ್ಮೆಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮನ್ನು ಮತ್ತೊಂದು ಭಿನ್ನವಾದ ಜಗತ್ತಿಗೆ ಕೊಂಡೊಯ್ಯುತ್ತದೆ. ಉದಾಹರಣೆಗೆ ಹ್ಯಾರಿ ಪಾಟರ್ ಅಭಿಮಾನಿಗಳು ಜಾಗತಿಕವಾಗಿ ಹೋಗ್ವಾರ್ಟ್ಸ್‌ನ್ನು ತಮ್ಮ ಮನೆ ಎಂದು ಕರೆಯುತ್ತಾರೆ. ಅದರ ಪ್ರತೀ ಮೂಲೆ ಮೂಲೆ ಅವರಿಗೆ ಗೊತ್ತಿದೆ. ಅವರು ಅಲ್ಲಿ ಲಕ್ಷಾಂತರ ಬಾರಿ ಹೋಗಿದ್ದಾರೆ. ಅಲ್ಲಿಗೆ ಹೋಗಿದ್ದು ಪುಟಗಳ ಮೂಲಕ. ಅದೇ ಓದು ನಿಮಗೆ ಕೊಡುವ ಲಾಭ. ಇಲ್ಲಿ ಇನ್ನೂ 15 ಇತರ ಕಾರಣಗಳನ್ನು ಕೊಡಲಾಗಿದೆ.

1. ಪ್ರತೀ ಬಾರಿ ಪುಸ್ತಕ ಓದುವಾಗ ಭಿನ್ನ ಜಗತ್ತೊಂದನ್ನು ಪ್ರವೇಶಿಸುವಿರಿ.

ಓದುವುದು ಎಂದರೆ ನಿಮ್ಮ ಒಂದು ಜಗತ್ತನ್ನು ಮತ್ತೊಂದು ಜಗತ್ತಾಗಿ ಪರಿವರ್ತಿಸುವುದು. ನೀವು ಹಲವು ಜಗತ್ತುಗಳನ್ನು ಕಾಣಲು ನಿಮಗೆ ಪುಸ್ತಕ ಕೈಗೆತ್ತಿಕೊಳ್ಳುವ ಅಗತ್ಯ ಕಾಣಬಹುದು.

2. ಇದು ನಿಮ್ಮನ್ನು ನಾಯಕನ ಸ್ಥಾನದಲ್ಲಿಟ್ಟು ನೋಡುವಂತೆ ಮಾಡುತ್ತದೆ.

ನೀವು ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದಂತೆಯೇ ನಿಮ್ಮ ಬಾಳಿನಲ್ಲಿ ಹೆಚ್ಚು ಸಾಹಸವಿರುತ್ತದೆ. ಹೀರೋಗಳಿಂದ ಶತ್ರುಗಳವರೆಗೆ ನೀವು ಲಕ್ಷಾಂತರ ಜೀವನ ನಡೆಸಿರುತ್ತೀರಿ.

3. ನೀವು ಓದುವಾಗ ನೀವು ಮತ್ತೊಬ್ಬರ ಜ್ಞಾನ ಮತ್ತು ಅನುಭವದ ಲಾಭ ಪಡೆಯುತ್ತೀರಿ.

ಇದರಿಂದಾಗಿ ಅದು ಶ್ರೀಮಂತ ಅಭ್ಯಾಸವಾಗುತ್ತದೆ.

4. ಕಾಲ್ಪನಿಕ ಕತೆಯನ್ನು ಓದುವುದು ನಿಮ್ಮನ್ನು ವಿಭಿನ್ನ ಸ್ಥಳಗಳು ಮತ್ತು ಸನ್ನಿವೇಶಗಳಲ್ಲಿ ಇಡುತ್ತದೆ. ಹಾಗೆ ನಿಮ್ಮನ್ನು ಹೆಚ್ಚು ಕಲ್ಪನಾಶೀಲವನ್ನಾಗಿಸುತ್ತದೆ.

ಓದುವುದು ನಿಮ್ಮ ಮೆದುಳಿನ ಆರೋಗ್ಯಕ್ಕೆ ಉತ್ತಮ ಎಂದು ಅಧ್ಯಯನಗಳು ಹೇಳಿವೆ. ಅದು ನಿಮ್ಮನ್ನು ಕಲ್ಪನಾಶೀಲ ವ್ಯಕ್ತಿಯನ್ನಾಗಿಸುತ್ತದೆ. ನೀವು ಸದಾ ಓದುವವರಾಗಿದ್ದರೆ ನಿಮ್ಮಲ್ಲಿ ಹೊಸ ಆಲೋಚನೆಗಳಿಗೆ ಕೊರತೆ ಇರುವುದಿಲ್ಲ.

5. ಓದುವುದರಿಂದ ನೀವು ಹೆಚ್ಚು ಅನುಭೂತಿ ಬೆಳೆಸಿಕೊಳ್ಳುವಿಸಿ.

ಏಕೆಂದರೆ ಜನರು ಮತ್ತು ಜಗತ್ತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ.

6. ಪ್ರಯಾಣಿಸುವಾಗ ಪುಸ್ತಕ ಉತ್ತಮ ಸಂಗಾತಿ.

ಬಹಳಷ್ಟು ಸಂದರ್ಭದಲ್ಲಿ ಇವು ಪ್ರಯಾಣವನ್ನು ಸುಖಕರವಾಗಿಸುತ್ತವೆ.

7. ಓದುವುದು ನಿಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ಸ್ನಾಯುಗಳ ಸಂಘರ್ಷವನ್ನು ಕಡಿಮೆಗೊಳಿಸುತ್ತದೆ.

ಅಧ್ಯಯನಗಳು ಹೇಳಿದ ಪ್ರಕಾರ ಓದುವುದು ಆರೋಗ್ಯಕ್ಕೂ ಉತ್ತಮ. ಅದಕ್ಕಿಂತ ದೊಡ್ಡದೇನಿದೆ?

8. ಏಕಾಂತದ ಸಂದರ್ಭದಲ್ಲಿ ಓದುವುದು ಮನಶ್ಶಾಂತಿ ಕೊಡುತ್ತದೆ ಮತ್ತು ಉತ್ತಮ ಸ್ನೇಹಿತನಂತೆ ಕೆಲಸ ಮಾಡುತ್ತದೆ. ಪುಸ್ತಕ, ಕಾಫಿ ಮತ್ತು ನೀವು.

9. ಏಕೆಂದರೆ ಪುಸ್ತಕ ಮಾರುಕಟ್ಟೆಯಲ್ಲಿ ನಿಮ್ಮ ಹೃದಯವಿರುತ್ತದೆ.

10. ಪುಸ್ತಕ ಕೆಫೆಗಳಲ್ಲಿ ನೀವು ನಿಮ್ಮ ಹೃದಯ ಕೊಡಲು ಬಯಸುವಿರಿ.

11. ನಿಮ್ಮ ವಿಸ್ತತ ಪುಸ್ತಕ ಸಂಗ್ರಹವು ಗೂಗಲ್ ಕೊಡದ ಮಾಹಿತಿಯನ್ನು ನಿಮಗೆ ಕೊಡುತ್ತದೆ.

12. ತಂತ್ರಜ್ಞಾನ, ಓದು ಹೆಚ್ಚು ಅಗ್ಗದ ಹವ್ಯಾಸ. ಇಬುಕ್ ಮತ್ತು ಅಂತರ್ಜಾಲದ ಆರ್ಕೈವ್ ನಿಮ್ಮ ಆಯ್ಕೆಯನ್ನು ಸರಳಗೊಳಿಸಿವೆ. ಅಲ್ಲದೆ ಈ ಮೂಲಗಳನ್ನು ಪಡೆಯುವುದೂ ಸುಲಭ.

13. ನಿರಂತರ ಹವ್ಯಾಸವಾಗಿ ಒಬ್ಬ ಓದುಗನ ಬಳಿ ಹೇಳಲು ಹಲವು ಕತೆಗಳಿರುತ್ತವೆ.

ಅದು ಆತನನ್ನು ಕುತೂಹಲದ ವ್ಯಕ್ತಿಯಾಗಿಸುತ್ತದೆಯಲ್ಲದೆ, ಉತ್ತಮ ಭಾಷಿಕನನ್ನಾಗಿಸುತ್ತದೆ.

14. ನಿಮ್ಮ ಪದಗುಚ್ಛ ಹೆಚ್ಚಾಗುತ್ತದೆ.

15. ಕಾಲವನ್ನು ಮೀರಿ ಸಾಗಲು ಸಾಧ್ಯವಾಗುವುದು ಓದಿನಲ್ಲಿ ಮಾತ್ರ.

ಏಕೆಂದರೆ ಲಕ್ಷಾಂತರ ಪುಸ್ತಕ ಓದಿ ಕೋಟ್ಯಂತರ ಸ್ಥಳಗಳಿಗೆ ಹೋಗಬಹುದು. ಒಂದು ಜೀವನದಲ್ಲಿ ಅದು ಸಾಧ್ಯವಾಗುವುದು ಕಷ್ಟ.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News