ಎಸ್‌ಡಬ್ಲ್ಯುಪಿ Vs ವರ್ಷಾಶನ; ನಿವೃತ್ತರಿಗೆ ಯಾವುದು ಉತ್ತಮ?
ಸಾಂದರ್ಭಿಕ ಚಿತ್ರ |moneycontrol
ನಿವೃತ್ತಿಯ ಯೋಜನೆಗಳನ್ನು ರೂಪಿಸುವಾಗ ಬಹುತೇಕ ಎಲ್ಲರ ಮುಂದೆ ಒಂದು ಪ್ರಶ್ನೆ ಮೂಡುತ್ತದೆ. ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲ್ಯಾನ್ ಉತ್ತಮವೇ ಅಥವಾ ಆನ್ಯುಟಿಗಳು ಉತ್ತಮವೆ? ನಿಮ್ಮ ಪ್ಲಾನಿಂಗ್ ಮುನ್ನ ಒಮ್ಮೆ ಇತ್ತ ಪರಿಶೀಲಿಸಿ
ವ್ಯವಸ್ಥಿತ ಹಿಂತೆಗೆತ ಯೋಜನೆ ಅಥವಾ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲ್ಯಾನ್ (SWP) ಎನ್ನುವುದು ಮ್ಯೂಚ್ಯುವಲ್ ಫಂಡ್ ಹೂಡಿಕೆದಾರರಿಗೆ ನೀಡುವ ಸೌಲಭ್ಯವಾಗಿದೆ. ಈ ಸೌಲಭ್ಯದಡಿ ಹೂಡಿಕೆದಾರರು ತಮ್ಮ ಹೂಡಿಕೆಯಿಂದ ನಿರ್ದಿಷ್ಟ ಮೊತ್ತವನ್ನು ನಿಯಮಿತ ಮಧ್ಯಂತರಗಳಲ್ಲಿ ಹಿಂಪಡೆಯಬಹುದು.
ಮತ್ತೊಂದೆಡೆ ವರ್ಷಾಶನಗಳು (Annuities) ಹೂಡಿಕೆದಾರರಿಗೆ ನಂತರದ ದಿನಾಂಕದಂದು ನಿಯಮಿತ ಪಾವತಿಗಳನ್ನು ಪಡೆಯುವ ಭರವಸೆಯೊಂದಿಗೆ ಖರೀದಿಸಿದ ಒಪ್ಪಂದದ ಉತ್ಪನ್ನದ ಪ್ರಕಾರವನ್ನು ಸೂಚಿಸುತ್ತದೆ. ವರ್ಷಾಶನಗಳು ಹೂಡಿಕೆದಾರರಿಗೆ ಜೀವವಿಮಾ ಕಂಪೆನಿಗಳು ನೀಡುವ ಉತ್ಪನ್ನಗಳಲ್ಲಿ ಮೊತ್ತವನ್ನು ಖಾತರಿಪಡಿಸಲು ಅವಕಾಶ ಕೊಡುತ್ತವೆ. ಇದರಿಂದ ಗಣನೀಯ ನಿವೃತ್ತ ನಿಧಿಯನ್ನು ಪಡೆಯುವ ಮೂಲಕ ನಿರಂತರ ಆದಾಯದ ಹರಿವಿಗೆ ದಾರಿಯಾಗುತ್ತದೆ. ವರ್ಷಾಶನಗಳಲ್ಲಿ ಸ್ಥಿರ ಮತ್ತು ವ್ಯತ್ಯಯಗೊಳ್ಳುವ ಸ್ವಭಾವಗಳ ಉತ್ಪನ್ನಗಳಿರುತ್ತವೆ.
ಬೆಂಗಳೂರಿನ ಆರ್ಕಿಟೆಕ್ಟ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಜ್ಯೋತಿ ಅವರ ಪ್ರಕಾರ ಎರಡೂ ಅಗತ್ಯವಿದೆ. “ಎಸ್‌ಡಬ್ಲ್ಯುಪಿ ತುರ್ತು ಹಣದ ಅಗತ್ಯ ಬಂದಾಗ ಬಳಸಿಕೊಳ್ಳಬಹುದು. ಆದರೆ ನಿವೃತ್ತಿ ಸಂದರ್ಭದಲ್ಲಿ ವ್ಯವಸ್ಥಿತ ಆದಾಯದ ಅಗತ್ಯವಿರುವವರು ವರ್ಷಾಶನಗಳ ಯೋಜನೆಗೆ ಹೋಗುವುದು ಸುರಕ್ಷಿತ. ನಾನು ವರ್ಷಾಶನದಲ್ಲಿ ಹೂಡಿಕೆ ಮಾಡಿದ್ದೇನೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಯೋಜನೆಯನ್ನು ಆರಿಸಿಕೊಂಡಿದ್ದು, ಹತ್ತು ವರ್ಷದ ನಂತರ ಹನ್ನೊಂದನೇ ವರ್ಷದಿಂದ ನನಗೆ 25 ವರ್ಷಗಳವರೆಗೆ ಆದಾಯ ಬರುತ್ತಿರುತ್ತದೆ” ಎನ್ನುತ್ತಾರೆ ಜ್ಯೋತಿ.
ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲ್ಯಾನ್
ಮಾರುಕಟ್ಟೆ ಭಾಗವಹಿಸುವಿಕೆ: ಎಸ್‌ಡಬ್ಲ್ಯುಪಿ ಸ್ಥಿರವಾದ ಮಾರುಕಟ್ಟೆಯ ಸ್ಥಿತಿಯಲ್ಲಿ ಹೂಡಿಕೆಗೆ ಬಹಳ ಪ್ರಗತಿಯ ಭರವಸೆ ನೀಡುತ್ತದೆ.
ಹೊಂದಿಕೆಯ ಅವಕಾಶ: ಮ್ಯೂಚುವಲ್ ಫಂಡ್‌ನಲ್ಲಿ ಹಿಂಪಡೆಯುವ ಸೌಲಭ್ಯವು ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಮೇಲೆ ನಿಯಂತ್ರಣವನ್ನು ನೀಡುತ್ತದೆ. ತಮ್ಮ ಅಗತ್ಯಗಳಿಗೆ ತಕ್ಕಂತೆ ಹೊಂದಿಕೆ ಮಾಡುವ ಅವಕಾಶ ಇರುತ್ತದೆ.
ತೆರಿಗೆ ಕಡಿತ: ಹೂಡಿಕೆದಾರರು ತಮ್ಮ ಎಸ್‌ಡಬ್ಲ್ಯುಪಿ ಮಾದರಿಯನ್ನು ಭಾರೀ ತೆರಿಗೆ ಹೇರದ ರೀತಿಯಲ್ಲಿ ಹಿಂಪಡೆಯುವುದು ಮತ್ತು ಉತ್ತಮ ಲಾಭಗಳನ್ನು ಪಡೆಯುವ ರೀತಿಯಲ್ಲಿ ರಚಿಸುವ ಅವಕಾಶ ಹೊಂದಿದ್ದಾರೆ.
ಮಾರುಕಟ್ಟೆ ಅಪಾಯ: ಎಲ್ಲಾ ಲಾಭಗಳ ಹೊರತಾಗಿಯೂ, ಎಸ್‌ಡಬ್ಲ್ಯುಪಿನ ಹೂಡಿಕೆ ಮೌಲ್ಯದ ಮೇಲೆ ಮಾರುಕಟ್ಟೆ ಸ್ಥಿತಿಯಿಂದಾಗಿ ಏರಿಳಿತ ಕಾಣಬಹುದು. ಕಾಲಾನುಗತದಲ್ಲಿ ತಮ್ಮ ಹಿಂಪಡೆತಗಳನ್ನು ಹೆಚ್ಚು ಉತ್ತಮಗೊಳಿಸಲು ಹೂಡಿಕೆದಾರರು ಮಾರುಕಟ್ಟೆಯನ್ನು ಚೆನ್ನಾಗಿ ಅರಿತುಕೊಂಡಿರಬೇಕು ಮತ್ತು ಸಕ್ರಿಯವಾಗಿ ನಿಭಾಯಿಸುವ ಸಾಮರ್ಥ್ಯ ಬೇಕಿದೆ.
ಎಸ್‌ಡಬ್ಲ್ಯುಪಿ ವಿರುದ್ಧ ವರ್ಷಾಶನ
ಗ್ಯಾರಂಟಿ ಇರುವ ಆದಾಯ: ನಿವೃತ್ತಿಯ ಸಂದರ್ಭದಲ್ಲಿ ವಿಮಾ ಕಂಪನಿಗಳು ಒದಗಿಸುವ ವರ್ಷಾಶನಗಳಲ್ಲಿ ಸ್ಥಿರವಾದ, ನಿಯಮಿತ ಮತ್ತು ಗ್ಯಾರಂಟಿ ಇರುವ ಪಾವತಿಗಳಿರುತ್ತವೆ. ಅದನ್ನು ಜೀವಿತಾವಧಿವರೆಗೂ ಪಡೆಯಬಹುದು ಅಥವಾ ಯೋಜನೆಯಲ್ಲಿ ಪೂರ್ವ-ಸೂಚಿತ ಅವಧಿಯವರೆಗೆ ಸಿಗಬಹುದು.
ಹಣದುಬ್ಬರದ ವಿರುದ್ಧ ರಕ್ಷಣೆ: ಕೆಲವು ವರ್ಷಾಶನಗಳು ನಿವೃತ್ತರ ಖರೀದಿ ಶಕ್ತಿಯನ್ನು ಮತ್ತು ಅವರ ಆದಾಯವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿರುತ್ತವೆ. ಅಂದರೆ ಹಣದುಬ್ಬರದಿಂದ ರಕ್ಷಣೆ ಅಥವಾ ಹಣದುಬ್ಬರ- ಹೊಂದಿಸಿದ ವರ್ಷಾಶನಗಳು ಸ್ವಯಂಚಾಲಿತವಾಗಿ ಆವರ್ತಕ ಆದಾಯ ಪಾವತಿಗಳನ್ನು ಏರಿಸುವ ಅಂತರ್‌ನಿರ್ಮಿತ ಉತ್ಪನ್ನಗಳಾಗಿರುತ್ತವೆ. ಇದು ಹಣದುಬ್ಬರದಿಂದ ಏರುವ ವೆಚ್ಚದಿಂದ ನಿವೃತ್ತರನ್ನು ರಕ್ಷಿಸುತ್ತದೆ.
ಕನಿಷ್ಠ ನಿರ್ವಹಣೆ: ಪಾವತಿಯ ಸ್ವರೂಪವನ್ನು ವಿಮಾ ಕಂಪನಿಯೇ ನಿರ್ವಹಿಸುವ ಕಾರಣದಿಂದ ಖರೀದಿಯ ನಂತರ ನಿರ್ವಹಣೆಯ ಅಗತ್ಯ ಹೆಚ್ಚು ಇರುವುದಿಲ್ಲ.
ಪ್ರಗತಿಯ ಅವಕಾಶ ಕಡಿಮೆ: ನಿರ್ವಹಣೆ ಮಾಡುವುದು ಮತ್ತು ಅಂದಾಜುಗಣನೆ ಸುಲಭವಾಗಿದ್ದರೂ, ಹಣಕಾಸು ಮಾರುಕಟ್ಟೆಯಲ್ಲಿರುವ ಹೂಡಿಕೆ ಸಾಧನಗಳಿಗೆ ಹೋಲಿಸಿದರೆ ವರ್ಷಾಶನಗಳಲ್ಲಿ ಪ್ರಗತಿಯ ಸಾಮರ್ಥ್ಯ ಕಡಿಮೆ ಇರುತ್ತದೆ.
ಹೊಂದಿಕೆಗೆ ಅವಕಾಶವಿಲ್ಲ: ಹೂಡಿಕೆದಾರ ತನ್ನ ವರ್ಷಾಶನ ಯೋಜನೆಯ ನಿಯಮಗಳನ್ನು ಬದಲಿಸುವ ಅವಕಾಶ ಇರುವುದಿಲ್ಲ. ತೆರಿಗೆಯ ದಂಡಗಳಿಲ್ಲದೆ ದೊಡ್ಡ ಮೊತ್ತವನ್ನು ಸ್ವೀಕರಿಸುವ ಅವಕಾಶವೂ ಇರುವುದಿಲ್ಲ. ಅನೇಕ ಶುಲ್ಕಗಳನ್ನೂ ವಿಧಿಸುವ ಸಾಧ್ಯತೆಯಿರುವ ಕಾರಣದಿಂದ ಹೂಡಿಕೆಯ ಮೊತ್ತವನ್ನು ಕಡಿತಗೊಳಿಸಬಹುದು.