×
Ad

ಚಪಾತಿ ತಿಂದಾಗ ಹೊಟ್ಟೆ ಉಬ್ಬರಿಸುವುದೇಕೆ ಗೊತ್ತೆ?

Update: 2025-12-04 11:34 IST

ಸಾಂದರ್ಭಿಕ ಚಿತ್ರ

ರೋಟಿ ಅಥವಾ ಚಪಾತಿ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಅಜೀರ್ಣ ಅಥವಾ ತಲೆನೋವು ಬರುತ್ತದೆ. ಇದು ಮುಖ್ಯವಾಗಿ ಆಹಾರದ ಸಮಸ್ಯೆಯಲ್ಲ. ಬದಲಾಗಿ ರೆಫ್ರಿಜರೇಟರ್ ಕಾರಣವಾಗಿರಬಹುದು ಎನ್ನುವುದು ನಿಮಗೆ ಗೊತ್ತೆ?

ಚಪಾತಿ ಅಥವಾ ರೋಟಿ ಭಾರತದ ಬಹುತೇಕ ಭಾಗಗಳಲ್ಲಿ ದಿನನಿತ್ಯದ ಆಹಾರವಾಗಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಉತ್ತರ ಭಾರತದ ಭಾಗಗಳಲ್ಲಿ ಚಪಾತಿ ಅಥವಾ ಗೋಧಿಹಿಟ್ಟಿನಿಂದ ತಯಾರಿಸಿದ ರೋಟಿ ಇಲ್ಲದೆ ಊಟ ಅಪೂರ್ಣ. ಗೋಧಿಯಲ್ಲಿ ತಯಾರಿಸಿದ ಈ ತಿನಿಸು ತಾಜಾ ಮತ್ತು ಬಿಸಿಯಾಗಿದ್ದಾಗ ಸಾಂಬಾರ್, ದಾಲ್ ಅಥವಾ ಪಲ್ಯದ ಜೊತೆಗೆ ರುಚಿಕರ!

ಆದರೆ ಬಹಳಷ್ಟು ಮಂದಿಗೆ ಈ ರೋಟಿ ಅಥವಾ ಚಪಾತಿ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಅಜೀರ್ಣ ಅಥವಾ ತಲೆನೋವು ಬರುತ್ತದೆ. ಇದು ಮುಖ್ಯವಾಗಿ ಆಹಾರದ ಸಮಸ್ಯೆಯಲ್ಲ, ಬದಲಾಗಿ ರೆಫ್ರಿಜರೇಟರ್ ಕಾರಣವಾಗಿರಬಹುದು ಎನ್ನುವುದು ನಿಮಗೆ ಗೊತ್ತೆ?

ವೈಜ್ಞಾನಿಕವಾಗಿ ನೋಡಿದಲ್ಲಿ ಚಪಾತಿಗಾಗಿ ತಟ್ಟಿದ ಗೋಧಿಹಿಟ್ಟನ್ನು ಫ್ರಿಜ್‌ನಲ್ಲಿಟ್ಟರೆ ಹುದುಗುವಿಕೆ (fermentation) ನಿಲ್ಲುವುದಿಲ್ಲ. ಯೀಸ್ಟ್ ಹಿಟ್ಟನ್ನು ಹುದುಗಿಸುತ್ತಲೇ ಇರುತ್ತದೆ. ಅದರಿಂದ ಕಾರ್ಬನ್ ಡೈ ಆಕ್ಸೈಡ್ ಮತ್ತು ಆಮ್ಲವನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವೊಮ್ಮೆ ರೊಟ್ಟಿಯನ್ನು ಕಟುವಾಗಿಸುತ್ತದೆ. ಅದರಿಂದ ಬ್ಯಾಕ್ಟೀರಿಯ ಚಟುವಟಿಕೆಗೂ ಕಾರಣವಾಗುತ್ತದೆ. ಇದು ಅನೇಕ ಜನರಲ್ಲಿ ತೀವ್ರ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗುತ್ತದೆ.

ತಜ್ಞರ ಪ್ರಕಾರ, ಗೋಧಿ ಹಿಟ್ಟು ರೆಫ್ರಿಜರೇಟರ್‌ನಲ್ಲಿ ಇಟ್ಟ ಮೇಲೆ 24 ಗಂಟೆಗಳ ನಂತರ ಗ್ಲುಟನ್ ಅನ್ನು ದುರ್ಬಲಗೊಳಿಸುವ ಕಾರಣದಿಂದ ಹೀಗೆ ಹೊಟ್ಟೆ ಉಬ್ಬರಿಸುವಿಕೆಯ ಅನುಭವವಾಗುತ್ತದೆ. ಉಷ್ಣತೆ ಕಡಿಮೆ ಇದ್ದರೂ ಅಥವಾ ಶೀತದ ವಾತಾವರಣದಲ್ಲೂ ಈ ಕ್ರಿಯೆ ನಿಲ್ಲುವುದಿಲ್ಲ.

ಪೋಷಕಾಂಶಗಳ ನಷ್ಟ, ರಕ್ಕದಲ್ಲಿನ ಸಕ್ಕರೆ ಅಂಶ ಏರಿಕೆ

ತಜ್ಞರು ಹೇಳುವ ಪ್ರಕಾರ, ಹಿಟ್ಟನ್ನು ಎರಡು ದಿನಗಳ ಕಾಲ ರೆಫ್ರಿಜರೇಟರ್‌ನಲ್ಲಿಟ್ಟು ಬಳಸಿದರೆ ಹುದುಗುವಿಕೆ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಗ್ಲುಟನ್‌ ಮುರಿತ ಇನ್ನಷ್ಟು ತೀವ್ರವಾಗುವ ಕಾರಣದಿಂದ ಪೋಷಕಾಂಶಗಳು ನಷ್ಟವಾಗಿಬಿಡುತ್ತವೆ. ಹೀಗೆ ಹುದುಗುವಿಕೆ ಹೆಚ್ಚಾದಾಗ ಪಿಷ್ಟವನ್ನು ವೇಗವಾಗಿ ಒಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯಂಶ ಏರಿಕೆಗೆ ಕಾರಣವಾಗುತ್ತದೆ. ಇದರಿಂದ ಗ್ಲುಕೋಸ್ ಪ್ರಮಾಣ ಹೆಚ್ಚಾಗುತ್ತದೆ.

ರೋಟಿಗಳನ್ನು ಆರೋಗ್ಯಕರವಾಗಿಸುವುದು ಹೇಗೆ?

ಚಪಾತಿ ಮಾಡಬೇಕು ಎಂದಾದಾಗ ಆಗಾಗ್ಗೆ ಹಿಟ್ಟು ಸಿದ್ಧಪಡಿಸಬೇಕು, ಹಿಟ್ಟನ್ನು ತಕ್ಷಣಕ್ಕೆ ಬೇಕಾದಂತೆ ತಟ್ಟಿ ಇಟ್ಟುಕೊಳ್ಳಬೇಕು. ಅಲ್ಲದೆ ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸಬೇಕು.

- ಹಿಟ್ಟನ್ನು ಸಿದ್ಧಪಡಿಸಲು ಹದವಾದ ಬಿಸಿನೀರನ್ನೇ ಬಳಸಿ. ಸಾಧ್ಯವಾದರೆ ಹದ ಬಿಸಿಮಾಡಿದ ಹಾಲನ್ನು ಬೆರೆಸಿ. ಅದರಿಂದ ಗ್ಲುಟನ್ ಸಕ್ರಿಯವಾಗಿರುತ್ತದೆ ಮತ್ತು ಮೃದು ಮತ್ತು ಹೆಚ್ಚು ನಮ್ಯವಾಗಿರುತ್ತದೆ.

- ಅತಿ ಮುಖ್ಯವಾಗಿ ನೀವು ಹಿಟ್ಟು ಮೃದು ಮತ್ತು ನಮ್ಯವಾಗುವಂತೆ 5ರಿಂದ 10 ನಿಮಿಷಗಳ ಕಾಲ ಕಲಸಿ ತಟ್ಟಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ಕಲಸದಂತೆ ಜಾಗರೂಕತೆ ವಹಿಸಿ. ಜಾಸ್ತಿ ಕಲಿಸಿದರೆ ಚಪಾತಿ ಗಡಸಾಗಿ ಒಣಗಿದಂತೆ ಬರಬಹುದು.

- ಹಿಟ್ಟಿಗೆ ಕರಗಿಸಿದ ತುಪ್ಪವನ್ನು ಸ್ವಲ್ಪ ಬೆರೆಸಿ. ಅಥವಾ ಎಣ್ಣೆ ಬೆರೆಸಿದರೂ ನಡೆಯುತ್ತದೆ. ಅದ್ದರಿಂದ ತಟ್ಟುವುದು ಸುಲಭವಾಗುತ್ತದೆ ಮತ್ತು ಚಪಾತಿಗಳು ಮೃದುವಾಗಿ ಬರುತ್ತವೆ.

- ಹಿಟ್ಟನ್ನು ತೇವವಿರುವ ಬಟ್ಟೆಯಲ್ಲಿ ಮುಚ್ಚಿ 20-30 ನಿಮಿಷಗಳ ಕಾಲ ಇಟ್ಟು ನಂತರ ಚಪಾತಿ ಮಾಡಲು ಪ್ರಾರಂಭಿಸಬೇಕು. ಹೀಗೆ ಅರ್ಧ ಗಂಟೆ ಇಡುವುದರಿಂದ ಗ್ಲುಟನ್ ಹೆಚ್ಚು ಹರಡಿಕೊಳ್ಳುತ್ತದೆ ಮತ್ತು ಚಪಾತಿ ಮಾಡುವುದು ಸುಲಭವಾಗುತ್ತದೆ. ಚಪಾತಿಗಳೂ ಚೆನ್ನಾಗಿ ಬರುತ್ತವೆ.

- ಚಪಾತಿಯನ್ನು ಸಮಾನ ದಪ್ಪದಲ್ಲಿ ಲಟ್ಟಿಸಬೇಕು. ಅಂದರೆ ಬಹಳ ತೆಳು ಕೂಡ ಆಗಬಾರದು ಮತ್ತು ಹೆಚ್ಚು ದಪ್ಪವೂ ಆಗಿರಬಾರದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News