×
Ad

ಇಂದು ಅಂತಾರಾಷ್ಟ್ರೀಯ ಹಮೂಸ್ ದಿನ

Update: 2016-05-13 15:13 IST

ಮುಂಬೈ : ಮಧ್ಯ ಪ್ರಾಚ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಹಮೂಸ್ ಒಂದು ಸೂಪರ್ ಫುಡ್ ಎಂಬುದು ನಿರ್ವಿವಾದ. ಜನರು ಈ ಹಮೂಸ್ ಸಲುವಾಗಿ ಜಗಳವಾಡುತ್ತಾರೆ, ಹಮೂಸ್ ಆಧಾರಿತ ಚಿತ್ರಗಳನ್ನು ತಯಾರಿಸುತ್ತಾರೆ ಹಾಗೂ ಹಾಡು ಹಾಡುತ್ತಾರೆ. ಈ ಚಿಕ್ ಪೀಸ್ ಸ್ಪ್ರೆಡ್ ಅದೆಷ್ಟು ಜನಪ್ರಿಯವೆಂದರೆ2010ರಲ್ಲಿ ಲೆಬನಾನ್ ಹಾಗೂ ಇಸ್ರೇಲ್ಗಿನ್ನೆಸ್ ದಾಖಲೆ ಪುಸ್ತಕ ಸೇರುವ ತವಕದಲ್ಲಿ ಹಮೂಸ್ ತಯಾರಿಯಲ್ಲಿ ನಾಮುಂದೆ ತಾಮುಂದೆ ಎಂದು ತೊಡಗಿದ್ದವು.

ಇಲ್ಲಿವೆ ಹಮೂಸ್ ಬಗ್ಗೆ ಕೆಲವು ಸ್ವಾರಸ್ಯಕರಮಾಹಿತಿಗಳು..

1. ಜೋರ್ಡನ್, ಸಿರಿಯ, ಈಜಿಪ್ಟ್, ಪ್ಯಾಲೆಸ್ತೀನ್, ಟರ್ಕಿ, ಇಸ್ರೇಲ್ ಹಾಗೂ ಲೆಬನಾನ್ ಈ ಹಮೂಸ್ ತಮ್ಮ ದೇಶಕ್ಕೆ ಸೇರಿದ್ದು ಎನ್ನತ್ತವೆ. ಈ ಪ್ರತಿಯೊಂದು ದೇಶವೂ ಹಮೂಸ್ ತಿನಿಸನ್ನು ತಮ್ಮದೇ ವಿಶಿಷ್ಟ ವಿಧಾನದಲ್ಲಿ ತಯಾರಿಸುತ್ತವೆಯಲ್ಲಿದೆ ಅದು ಇಲ್ಲಿನಜನರ ಆಹಾರದ ಅವಿಭಾಜ್ಯ ಅಂಗವಾಗಿದೆ.

2.ಹಮೂಸ್ ಅತ್ಯಂತ ಆರೋಗ್ಯಕರವಾಗಿದೆ. ಕಡಲೆ, ಎಳ್ಳಿನ ಪೇಸ್ಟ್, ಬೆಳ್ಳುಳ್ಳಿ ಹಾಗೂ ಓಲಿವ್ ಆಯಿಲ್ ಮಿಶ್ರಿತ ಈ ತಿನಿಸು ಅದು ಹೇಗೆ ಆರೋಗ್ಯಭರಿತವಾಗುವುದಿಲ್ಲ ಹೇಳಿ. ಹಮೂಸ್ ದೇಹದ ಕೊಲಸ್ಟರಾಲ್, ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ.

3. ಒಂದು ಬೌಲ್ ಹಮೂಸ್ ನಲ್ಲಿದೆ ವಿಟಮಿನ್ ಸಿ, ಬಿ6, ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಕಬ್ಬಿಣದಂಶ, ಝಿಂಕ್ ಹಾಗೂ ಮ್ಯಾಂಗನೀಸ್.

4. ಬ್ರೆಡ್ಡಿಗೆ ಹಮೂಸ್ ಸವರಿ ತಿಂದರೆ ಅದೇನು ರುಚಿ ! ಸ್ಯಾಂಡ್ ವಿಚ್ ತಯಾರಿಯಲ್ಲೂ ಅದನ್ನು ಉಪಯೋಗಿಸಬಹುದಾಗಿದೆ. ಅದನ್ನು ಹಾಗೆಯೇ ನೀರಿನಲ್ಲಿ ಬೆರೆಸಿ ಸಲಾಡ್ ನಲ್ಲೂ ಉಪಯೋಗಿಸಬಹುದು. ಮೀನು ಬೇಕ್ ಮಾಡುವ ಮೊದಲು ಅದಕ್ಕೆ ಹಮೂಸ್ ಸವರಿದರೆ ಇನ್ನೂ ಚೆನ್ನಾಗಿರುತ್ತೆ.

5. ಲೇಡ್ ಗಾಗಾ, ಕ್ಯಾಟಿ ಪೆರ್ರಿ, ಜಸ್ಟಿನ್ ಟಿಂಬರ್ ಲೇಕ್ ಮುಂತಾದವರಿಗೂ ಹಮೂಸ್ ಎಂದರೆ ಇಷ್ಟ. ಮಧ್ಯ ಪ್ರಾಚ್ಯ ದೇಶಗಳನ್ನು ಹೊರತು ಪಡಿಸಿಹಮೂಸ್ ಅಮೇರಿಕಾದಲ್ಲಿ ಅತ್ಯಂತ ಜನಪ್ರಿಯವಾಗಿದೆ.

6. ಹಮೂಸ್ ಬಗ್ಗೆ ಸಿನಿಮಾಗಳೂ ತಯಾರಾಗಿವೆ. ‘ಮೇಕ್ ಹಮೂಸ್, ನಾಟ್ ವಾರ್’ ‘ದಿ ಹಮೂಸ್ ಎನ್ ಫೋರ್ಸ್‌ಮೆಂಟ್ ಏಜನ್ಸಿ’ಚಿತ್ರಗಳು ಜನಪ್ರಿಯವಾಗಿವೆ. ಇತ್ತೀಚಿಗನ ಸಿನಿಮಾ ‘ಹಮೂಸ್ !’ ಮೂವರು ಹೋಟೆಲಿಗರ ಇಸ್ರೇಲ್ ಪ್ರಯಾಣದ ಸುತ್ತ ನಿರ್ಮಿತವಾಗಿದ್ದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News