×
Ad

ರೈಲ್ವೇ ನಿಲ್ದಾಣದಲ್ಲಿ ಕುಟುಂಬದಿಂದ ಬೇರ್ಪಟ್ಟ ಬಾಲಕಿ 20 ನಿಮಿಷಗಳಲ್ಲಿ ಮರಳಿ ತಾಯಿಯ ಮಡಿಲಿಗೆ

Update: 2016-05-17 16:00 IST

ನಾಗ್ಪುರ : ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಟೀಕೆಗೆ ಗುರಿಯಾದರೆ ಮತ್ತೆ ಹಲವು ಬಾರಿ ಉತ್ತಮ ಕಾರ್ಯ ಮಾಡಿ ಪ್ರಶಂಸೆ ಪಡೆದಿವೆ. ಇಂತಹ ಒಂದು ಉದಾಹರಣೆ ಇಲ್ಲಿದೆ. ಕಳೆದ ವಾರ ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕಿ ಅವನಿ ಜೈನ್ ತನ್ನ ಕುಟುಂಬದಿಂದ ಅದು ಹೇಗೋ ಬೇರ್ಪಡೆಯಾಗಿ ಅಳುತ್ತಾ ಇರುವುದನ್ನು ರೈಲ್ವೇ ಪೊಲೀಸರು ಕಂಡು ಬಾಲಕಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಾಲಕಿ ಹೇಳಿದ ಪ್ರಕಾರ ಆಕೆ ತನ್ನ ತಾಯಿ ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ನಾಗ್ಪುರದಿಂದ ಭೋಪಾಲಕ್ಕೆ ಪ್ರಯಾಣಿಸುವವಳಿದ್ದಳು.

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಕೂಡಲೇ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಇರುವ ಬಾಲಕಿಯ ಚಿತ್ರವನ್ನುತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದರು.ಈ ಫೊಟೋವನ್ನು ಸಾಮಾಜಿಕ ತಾಣ ವಾಟ್ಸೆಪ್ ನಲ್ಲಿ ಕೂಡ ಹಲವರು ಪೋಸ್ಟ್ ಮಾಡಿ ನಿಮಿಷಗಳಲ್ಲಿ ಸುಮಾರು 200 ವಾಟ್ಸೆಪ್ ಗುಂಪುಗಳು ಈ ಫೊಟೋವನ್ನು ಶೇರ್ ಮಾಡಿದವಲ್ಲದೆ ಅದು ಅಮ್ಚೆ ನಾಗ್ಪುರ್ ವಾಟ್ಸೆಪ್ ಗ್ರೂಪ್ ತಲುಪಿ ಕೇವಲ 20 ನಿಮಿಷಗಳಲ್ಲಿ ರೈಲ್ವೇ ಪೊಲೀಸರು ಬಾಲಕಿಯ ತಾಯಿ ಸುನೈನಾ ಜೈನ್ ಅವರನ್ನು ಪತ್ತೆ ಹಚ್ಚಿದರು.

ಅವನಿಯ ಚಿಕ್ಕಪ್ಪ ಶಂಕಿ ಜೈನ್ ಸಚಿವರಿಗೆ ಹಾಗೂ ರೈಲ್ವೇ ಪೊಲೀಸರಿಗೆ ಧನ್ಯವಾದ ಹೇಳಿ ತಾನು ಅವನಿ ಜತೆ ಮನೆಯಲ್ಲಿರುವ ಚಿತ್ರವನ್ನು ಸಚಿವರ ಫೇಸ್ಬುಕ್ ಪುಟಕ್ಕೆ ಪೋಸ್ಟ್ ಮಾಡಿ ಆಕೆತನ್ನ ತಾಯಿ ಹಾಗೂ ಕುಟುಂಬದೊಂದಿಗಿದ್ದಾಳೆ ಎಂದು ಬರೆದರು.

ರೈಲ್ವೇ ನಿಲ್ದಾಣದಲ್ಲಿತಾಯಿ ಹಾಗೂ ಚಿಕ್ಕಪ್ಪಮುಂದೆ ನಡೆಯುತ್ತಿದ್ದಾಗ ಅವರ ಹಿಂದಿದ್ದ ಅವನಿಸ್ವಲ್ಪ ಹೊತ್ತಿನಲ್ಲಿಯೇ ಅವರಿಂದ ಬೇರ್ಪಟ್ಟು ಅಳಲಾರಂಭಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News