×
Ad

ಬಂದ್‌ಗೆ ಬೆಲೆ ಸಿಕ್ಕೀತೇ?

Update: 2016-05-19 23:56 IST

ಮಾನ್ಯರೆ,
ಇತ್ತೀಚಿನ ದಿನಗಳಲ್ಲಿ ಜನಪರ ಸಂಘಟನೆಗಳು ತಮ್ಮ ಪ್ರತಿಭಟನೆಯ ಬಗ್ಗೆ ಜಗ್ಗದ ರಾಜಕಾರಣಿಗಳ ವಿರುದ್ಧ ಕೊನೆಯ ಅಸ್ತ್ರವಾಗಿ ಬಂದ್ ಆಚರಿಸುವುದು ಪದ್ಧತಿಯಾಗಿದೆ. ಆದರೆ ಈ ಬಂದ್ ಆಚರಣೆಗೆ ರಾಜಕಾರಣಿಗಳು ಬೆಲೆ ಕೊಡುತ್ತಾರೆಯೇ?

ಎತ್ತಿನ ಹೊಳೆ ಯೋಜನೆಯ ವಿರುದ್ಧ ಜಿಲ್ಲೆಯ ರಾಜಕಾರಣಿಗಳು ಏಕಮನಸ್ಕರಾಗಿ ಬೆಂಬಲಕೊಟ್ಟಿದ್ದರೆ ಈ ಯೋಜನೆಗೆ ಯಾವ ಬಂದ್‌ನ ಅಗತ್ಯವೂ ಇರಲಿಲ್ಲ. ಆದರೆ ಕೆಲವು ರಾಜಕಾರಣಿಗಳ ಇಬ್ಬಂದಿತನದಿಂದಾಗಿ ಜನತೆ ಯೋಜನೆಯ ಬಗ್ಗೆ ಇಷ್ಟೊಂದು ಪ್ರತಿಭಟಿಸುತ್ತಿದ್ದರೂ ಯೋಜನೆಗೆ ಸಂಬಂಧಿತ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿವೆ. ಯಾವ ಕೂಗು ಮೇಲಿನವರನ್ನು ತಟ್ಟುತ್ತಿಲ್ಲ. ಬಂದ್ ಆಚರಿಸುವುದರಿಂದ ಶ್ರೀಮಂತರೇನೋ ತೊಂದರೆಗೊಳಗಾಗುವುದಿಲ್ಲ. ಅವರು ಈ ಯಾವುದೇ ಗೊಡವೆ ಬೇಡವೆಂದು ಮನೆಯಲ್ಲಿ ಕುಳಿತು ಟಿವಿಯಲ್ಲಿ ಮುಳುಗಿರುತ್ತಾರೆ. ಆದರೆ ಅಂದಂದಿನ ಊಟ ಅಂದೇ ಸಂಪಾದಿಸುವ ಬಡವರಿಗೆ ಮಾತ್ರ ಈ ಬಂದ್‌ನ ಬಿಸಿ ತಟ್ಟುತ್ತದೆ. ಸಂಚರಿಸಲು ವಾಹನಗಳಿಲ್ಲದೆ, ತಿನ್ನಲು ಆಹಾರ ಸಿಗದೆ ಅವರು ಮಾತ್ರ ಪರದಾಡಬೇಕಾಗುತ್ತದೆ. ಅದರಲ್ಲೂ ಅನಾರೋಗ್ಯ ಪೀಡಿತರಾದರೆ ದೇವರೇ ಗತಿ.
ಆದ್ದರಿಂದ ಬಂದ್‌ಗೆ ಕರೆ ಕೊಡುವ ಸಂಘಟನೆಗಳು ಇನ್ನು ಮುಂದಕ್ಕಾದರೂ ಇಂತಹ ಬಡವರ ಬಗ್ಗೆಯೂ ಒಂದಿಷ್ಟು ಯೋಚಿಸಿ ಮುಂದಡಿಯಿಡಬೇಕು.
 

Writer - -ರಾಜೇಶ್ ಕರ್ಕೇರ, ಮಂಗಳೂರು

contributor

Editor - -ರಾಜೇಶ್ ಕರ್ಕೇರ, ಮಂಗಳೂರು

contributor

Similar News