ರಾಜ್ಯ ಪಕ್ಷ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ಡಿಎಂಡಿಕೆ

Update: 2016-05-22 04:46 GMT

ಚೆನ್ನೈ, ಮೇ 22: ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವ ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಚಿತ್ರನಟ ವಿಜಯಕಾಂತ್‌ರಿಂದ ಸ್ಥಾಪಿಸಲ್ಪಟ್ಟಿರುವ ಡಿಎಂಡಿಕೆ ಪಕ್ಷ ಭಾರತದ ಚುನಾವಣಾ ಆಯೋಗದಿಂದ ರಾಜ್ಯ ಪಕ್ಷ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿದೆ.

ಶೀಘ್ರವೇ ಪಕ್ಷ ಅಮಾನ್ಯತೆಗೊಳಿಸುವ ಆದೇಶ ಹೊರಡಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಷರತ್ತಿನಲ್ಲಿ ಸ್ಪಷ್ಟಪಡಿಸಿರುವ ಸಾಧನೆ ಮಾಡದೇ ಇರುವ ಪಕ್ಷವನ್ನು ಚುನಾವಣೆ ಆಯೋಗ ಅಮಾನ್ಯ ಮಾಡುತ್ತದೆ. ರಾಜ್ಯ ಪಕ್ಷ ಮಾನ್ಯತೆಯಿರಬೇಕಾದರೆ ಕನಿಷ್ಠ ಓರ್ವ ಶಾಸಕನಾದರೂ ಚುನಾವಣೆಯಲ್ಲಿ ಆಯ್ಕೆಯಾಗಬೇಕಾಗುತ್ತದೆ. ವಿಜಯಕಾಂತ್ ನೇತೃತ್ವದ ಡಿಎಂಡಿಕೆ ಇತ್ತೀಚೆಗೆ ನಡೆದ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆದ್ದುಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News