ಪತ್ರಿಕೋದ್ಯಮ ಬಿಟ್ಟು ರಾಜಕೀಯಕ್ಕೆ ಬನ್ನಿ

Update: 2016-05-22 05:43 GMT

ಹೊಸದಿಲ್ಲಿ,ಮೇ 22: "ಆಜ್ ತಕ್ ಮಾಡಿರುವ ಈ ಟ್ವೀಟ್ ಅಮಿತ್ ಷಾ ಹಾಗೂ ಅಜಯ್ ಮಾಕೆನ್ ಅವರ ಪರವಾಗಿರುವಂಥದ್ದು. ಹಾಗೆ ನಿಮಗೆ ರಾಜಕೀಯ ಮಾಡಬೇಕಿದ್ದರೆ ಮುಕ್ತವಾಗಿ ಹೊರ ಬನ್ನಿ. ಪತ್ರಿಕೋದ್ಯಮದ ಮುಖವಾಡದ ಹಿಂದೆ ಯಾಕೆ ಅವಿತುಕೊಂಡಿದ್ದೀರಿ?" ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಿಂದಿ ವಾಹಿನಿ ಆಜ್ ತಕ್ ಸಮೂಹವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಜ್ರಿವಾಲ್ ಅವರ ಸಡಿಲ ಮಾತನಾಡುತ್ತಿದ್ದಾರೆ ಎಂದು ಚಾನಲ್ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಆಪ್ ಮುಖಂಡ ಈ ತಿರುಗೇಟು ನೀಡಿದ್ದಾರೆ. ಚಾನಲ್‌ನ ಟ್ವಿಟ್ಟರ್ ನಿರ್ವಹಿಸುವವರು ಈ ಟ್ವಿಟ್ಟನ್ನು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ದಿಲ್ಲಿ  ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ಅವರಿಗೂ ಟ್ಯಾಗ್ ಮಾಡಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ವಾಗ್ದಾಳಿ ನಡೆಸಿದ್ದಾರೆ.

ಕೇಜ್ರಿವಾಲ್ ಅವರು ಡಿಸ್ಕಾಂಗಳಿಗೆ, ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಪರಿಸ್ಥಿತಿ ಸುಧಾರಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುವ ವೀಡಿಯೊವನ್ನು ಆಜ್ ತಕ್ ಪ್ರಸಾರ ಮಾಡಿತ್ತು. ಇಂಜಿನಿಯರ್‌ಗಳ ಲೋಪದಿಂದಾಗಿ ಪದೇ ಪದೇ ಇಂಥ ವಿದ್ಯುತ್ ಕಡಿತ ಉಂಟಾಗುವುದನ್ನು ಸಹಿಸುವುದಿಲ್ಲ ಎಂದು ಕೇಜ್ರಿವಾಲ್ ಪತ್ರಕರ್ತರ ಬಳಿ ಮಾತನಾಡುತ್ತಾ ಎಚ್ಚರಿಸಿದ್ದರು. ಈ ವೇಳೆ. "ಎಲ್ಲ ಗಾತ್ರ ಹಾಗೂ ಎಲ್ಲ ಆಕಾರದ ದಂಡಗಳು ಸಿದ್ಧವಾಗಿವೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News