×
Ad

ರಾಜ್‌ನಾಥ್ ಸಿಂಗ್ ಮನೆ ಹೊರಗೆ ಜಾಟ್ ನಾಯಕರಿಂದ ಪ್ರತಿಭಟನೆ

Update: 2016-05-29 19:31 IST

 ಹೊಸದಿಲ್ಲಿ, ಮೇ 29: ಜಾಟ್ ಮೀಸಲಾತಿಯಲ್ಲಿ ಹೊರಬಂದಿರುವ ಅಂತಿಮ ಪ್ರಸ್ತಾವವೊಂದರ ನಂತರ ಹರಿಯಾಣದ ಏಳು ಜಿಲ್ಲೆಗಳ ಸಿಆರ್‌ಪಿಎಫ್ ಜವಾನರಿಂದ ಗಸ್ತು ವ್ಯವಸ್ಥೆ ವಿನ್ಯಾಸಗೊಳಿಸಲಾಗಿದ್ದು ರವಿವಾರ ದಿಲ್ಲಿಯಲ್ಲಿ ಜಾಟ್ ಮೀಸಲಾತಿ ಸಂಘರ್ಷ ಸಮಿತಿಯ ನಾಯಕರು ಗೃಹ ಸಚಿವ ರಾಜನಾಥ ಸಿಂಗ್‌ರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಜಾಟ್ ನಾಯಕರು ರಾಜ್‌ನಾಥ್ ಸಿಂಗ್‌ರಿಗೆ ಮನವಿಯನ್ನು ಸಲ್ಲಿಸಿದ್ದು 130 ಮಂದಿಯ ವಿರುದ್ಧ ದಾಖಲಿಸಲಾದ ದೇಶದ್ರೋಹ ಮೊಕದ್ದಮೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ಸರಕಾರ ಮೀಸಲಾತಿ ಬೇಡಿಕೆಯನ್ನು ಪರಿಗಣಿಸಬೇಕು ಮತ್ತು ರಾಜಕುಮಾರ್ ಸೈನಿ ನೀಡಿರುವ ಹೇಳಿಕೆಯ ವಿರುದ್ಧ ಕ್ರಮಕೈಗೊಳಬೇಕೆಂದೂ ಜಾಟ್ ನಾಯಕರು ಆಗ್ರಹಿಸಿದ್ದಾರೆ. ಈಗಾಗಲೇ ಜೂನ್ ಐದರಿಂದ ಮತ್ತೆ ಮೀಸಲಾತಿ ಆಂದೋಲನವನ್ನು ಪ್ರಾರಂಭಿಸುವುದಾಗಿ ಹರಿಯಾಣದ ಬಿಜೆಪಿ ಸರಕಾರ ಜಾಟ್ ನಾಯಕರು ಎಚ್ಚರಿಕೆ ನೀಡಿದ್ದು ಸರಕಾರ ಸೋನಿಪತ್‌ನ ಯಮುನಾ ನದಿಯ ಕಾಲುವೆ ಬಳಿ ಬಿಗಿ ಪಹರೆ ಏರ್ಪಡಿಸಿದೆ. ಪೊಲೀಸ್ ಮತ್ತು ಗುಪ್ತಚರ ದಳ ಕಟ್ಟೆಚ್ಚರದಿಂದಿರಲು ಹಾಗೂ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌ಗಳಲ್ಲಿ ದ್ವೇಷಪೂರಿತ ಹಾಗೂ ಉದ್ರೇಕಕಾರಿ ಸಂದೇಶಗಳ ಮೇಲೆ ನಿಗಾ ಇರಿಸಲು ಸರಕಾರ ಸೂಚಿಸಿದೆ.

63ಗ್ರಾಮಗಳ ಸರಪಂಚರಿಂದ ಮುಖ್ಯಮಂತ್ರಿ ಭೇಟಿ:

    ಈ ನಡುವೆ ಮಾಂಡೊಠಿಯಲ್ಲಿ ಜಾಟ್ ಪಂಚಾಯತ್ ನಡೆದಿದ್ದು ಜಾಟ್ ಮೀಸಲಾತಿ ಬೇಡಿಕೆಯೊಂದಿಗೆ 63ಗ್ರಾಮಗಳ ಸರಪಂಚರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಅದರಲ್ಲಿ ತೀರ್ಮಾನಿಸಲಾಗಿದೆ. ತಮ್ಮ ಬೇಡಿಕೆಗಳ ಕುರಿತು ಮಾಂಡೊಠಿ ಪಂಚಾಯತ್‌ನಲ್ಲಿ ಬಂದು ಮುಖ್ಯಮಂತ್ರಿ ಹೇಳಿಕೆ ನೀಡಬೇಕೆಂದು ಪಂಚಾಯತ್ ಆಗ್ರಹಿಸಿದೆ. ಒಂದು ವೇಳೆ ಪಂಚಾಯತ್‌ಗೆ ಬರದಿದ್ದರೆ ಸರಕಾರವನ್ನು ಬಹಿಷ್ಕರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ. ಜಾಟ್ ಮೀಸಲಾತಿಯ ವಿರುದ್ಧ ತಡೆಯಾಜ್ಞೆ ತೆರವುಗೊಳಿಸುವುದು. ಆಂದೋಲನದಲ್ಲಿ ಮೃತರಾದ ಯುವಕರಿಗೆ ಹುತಾತ್ಮತೆ ಸ್ಥಾನ ನೀಡುವುದು ಮತ್ತು ಆಂದೋಲನದ ವೇಳೆ ಜಡಿಯಲಾದ ಕೇಸುಗಳನ್ನು ವಾಪಸು ಪಡೆಯುವ ಕುರಿತು ಪಂಚಾಯತ್ ಬೇಡಿಕೆಯನ್ನು ಮುಂದಿಟ್ಟಿದೆ ಹಾಗೂ ಜೂನ್ ಐದರಂದು ಮತ್ತೆ ಪಂಚಾಯತ್ ಸೇರಲಿದೆ.

ಮೀಸಲಾತಿಯನ್ನು ಬೆಂಬಲಿಸಿದ ಕೇಂದ್ರ ಸಚಿವ ಬೀರೇಂದ್ರ ಸಿಂಗ್:

      ರೋಹ್ಟಕ್‌ನಲ್ಲಿ ಮತ್ತೊಮ್ಮೆ ಕೇಂದ್ರ ಗ್ರಾಮೀಣ ವಿಕಾಸ ಸಚಿವ ಬೀರೇಂದ್ರ ಸಿಂಗ್ ಜಾಟ್ ಮೀಸಲಾತಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಪರಿಚ್ಛೇದ 9ರಲ್ಲಿ ಜಾಟ್ ಸಮುದಾಯವನ್ನು ಸೇರಿಸಿದರೆ ಜಾಟರು ಶೇ. 27 ಮೀಸಲಾತಿ ವ್ಯಾಪ್ತಿಗೆ ಬರಲಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ. 2ರಷ್ಟು ಜಾಟ್ ಸಮುದಾಯ ಇದ್ದು ಇವರನ್ನು ಶೇ. 27 ಮೀಸಲಾತಿ ವ್ಯಾಪ್ತಿಗೆ ಸೇರಿಸುವುದರಿಂದ ಯಾರಿಗೂ ಯಾವ ತೊಂದರೆಯೂ ಇಲ್ಲ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News