×
Ad

' ಹಿನ್ನೆಲೆ ಗಾಯಕಿ ಎಂದು ಹೇಳಲಾದ ಲತಾ ಮಂಗೇಶ್ಕರ್' !

Update: 2016-06-01 17:36 IST

ನವದೆಹಲಿ : ಎಐಬಿ ಖ್ಯಾತಿಯ ತನ್ಮಯ್ ಭಟ್ ‘ಸಚಿನ್ ವರ್ಸಸ್ ಲತಾ ಸಿವಿಲ್ ವಾರ್’ ಎಂಬ ಹಾಸ್ಯಮಿಶ್ರಿತಸ್ಪೂಫ್ ವೀಡಿಯೋವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಸಾಕಷ್ಟು ವಿವಾದಕ್ಕೀಡಾಗಿರುವ ವಿಚಾರದ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ವರದಿಯೊಂದರಲ್ಲಿ ‘ಹಿನ್ನೆಲೆ ಗಾಯಕಿಯೆಂದು ಹೇಳಲಾದ ಲತಾ ಮಂಗೇಶ್ಕರ್’ ಎಂದು ಬರೆದಿರುವ ಹಿನ್ನೆಲೆಯಲ್ಲಿ ಪತ್ರಿಕೆ ಟ್ವಿಟ್ಟರ್ ನಲ್ಲಿ ಮಂಗಳಾರತಿ ಎದುರಿಸಬೇಕಾಗಿ ಬಂದಿದೆ. ಈ ಲೇಖನದಲ್ಲಿ ಸಚಿನ್ ಅವರನ್ನು‘ಅಪಾರ ಜನಪ್ರಿಯತೆಯ ಕ್ರಿಕೆಟರ್’ ಎಂದಷ್ಟೇ ಹೇಳಲಾಗಿದೆ.

ಭಟ್ ಅವರ ವಿವಾದಿತ ವೀಡಿಯೋವನ್ನು ಬಣ್ಣಿಸಿದ ನ್ಯೂಯಾರ್ಕ್ ಟೈಮ್ಸ್ ವರದಿ ಹೀಗೆಂದು ಹೇಳಿದೆ. ‘‘ಸ್ನ್ಯಾಪ್ ಚ್ಯಾಟ್ ಮುಖಾಂತರ ಸೃಷ್ಟಿಸಲಾದ ಈ ವೀಡಿಯೋದಲ್ಲಿ ಭಟ್ ಫೇಸ್-ಸ್ವ್ಯಾಪ್ ಫೀಚರ್ ಗಳನ್ನು ಬಳಸಿ 2013ರಲ್ಲಿ ನಿವೃತ್ತರಾದ ‘ಅಪಾರ ಜನಪ್ರಿಯತೆಯ ಕ್ರಿಕೆಟರ್’ ಸಚಿನ್ ಅವರನ್ನು ಹಾಗೂ 1940ರಿಂದ ವೃತ್ತಿಯಲ್ಲಿರುವ ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯಕಿಯೆಂದು ಹೇಳಲಾದ ಲತಾ ಮಂಗೇಶ್ಕರ್ ಅವರನ್ನು ಅನುಕರಿಸಿದ್ದಾರೆ,’’ಎಂದು ಹೇಳಿದೆ.
ಇನ್ನೊಬ್ಬ ವ್ಯಕ್ತಿಯ ಮುಖವನ್ನುಪಡೆಯುವಂತೆ ಮಾಡುವ ಫೇಸ್ ಸ್ವ್ಯಾಪ್ ಎಂಬ ಆ್ಯಪ್ ಬಳಸಿ ಭಟ್ ಆ ವೀಡಿಯೋ ತಯಾರಿಸಿದ್ದು ಇದು ಲತಾ ಹಾಗೂ ಸಚಿನ್ ಅವರ ಅಭಿಮಾನಿಗಳು ತೀವ್ರ ಆಕ್ರೋಶಗೊಳ್ಳುವಂತೆ ಮಾಡಿದ್ದವು.
86 ವರ್ಷದ ಲತಾ ಮಂಗೇಶ್ಕರ್ ‘ಇನ್ನೂ ಏಕೆ ಜೀವಂತವಾಗಿದ್ದಾರೆ’ ಹಾಗೂ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ತೆಂಡುಲ್ಕರ್ ಗಿಂತ ಉತ್ತಮರೇಎಂದೂ ತನ್ಮಯ್ ತಮ್ಮ ಸ್ಪೂಫ್ ನಲ್ಲಿಪ್ರಶ್ನಿಸಿದ್ದರು.
ಇಷ್ಟು ಸಾಲದೆಂಬಂತೆ ಈಗ ನ್ಯೂಯಾರ್ಕ್ ಟೈಮ್ಸ್ ವರದಿ ಈ ಇಬ್ಬರು ಜೀವಂತ ದಂತಕಥೆಗಳ ಅಭಿಮಾನಿಗಳನ್ನು ಮತ್ತಷ್ಟು ಸಿಟ್ಟಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News