×
Ad

ವಿವಾದಕ್ಕೆ ಕಾರಣವಾದ ಜಡೇಜ ಫೋಟೊ

Update: 2016-06-17 14:43 IST

ಗುಜರಾತ್, ಜೂ.17:ಟೀಮ್‌ ಇಂಡಿಯಾದ ಆಲ್‌ರೌಂಡರ‍್ ರವೀಂದ್ರ ಜಡೇಜ ತನ್ನ ಪತ್ನಿರೀವಾ ಸೋಲಂಕಿಯೊಂದಿಗೆ   ಗುಜರಾತ್​ನ ಗಿರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಿಂಹಗಳ ಮುಂದೆ ಫೋಟೋ ತೆಗೆಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಜಡೇಜ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಗುಜರಾತ್ ಅರಣ್ಯ ಇಲಾಖೆ ತನಿಖೆಗೆ ಆದೇಶ ನೀಡಿದೆ.
ಜಾಮ್ ನಗರದ ರವೀಂದ್ರ ಜಡೇಜಾ ಗುರುವಾರ ಗಿರ್ ರಾಷ್ಟ್ರೀಯ ಅಭಯಾರಣ್ಯಕ್ಕೆ ಪತ್ನಿ, ಸ್ನೇಹಿತರೊಂದಿಗೆ  ಭೇಟಿ ನೀಡಿದ್ದರು. ಗಿರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರವಾಸಿಗರು ವಾಹನದಿಂದ ಕೆಳಗಿಳಿಯುವಂತಿಲ್ಲ. ಆದರೆ  ಜಡೇಜಾ ಮತ್ತು ಅವರ ಪತ್ನಿ ವಾಹನದಿಂದ ಕೆಳಗಿಳಿದು  ಸಿಂಹಗಳ ಮುಂದೆ ಫೋಟೊ ತೆಗೆಸಿದ್ದಾರೆ  ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News