ಕೇಂದ್ರ ಸರಕಾರ ಖರ್ಚು ಮಾಡಿದ್ದು ಎಷ್ಟು ಗೊತ್ತೇ?
ಹೊಸದಿಲ್ಲಿ, ಜೂ.21: ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ 57 ಸಚಿವರುಗಳು ದೇಶಾದ್ಯಂತ ಎರಡನೆ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ಹಣ ಕೊಟ್ಟವರ್ಯಾರು, ಸರಕಾರದಿಂದ ಎಷ್ಟು ಹಣ ವ್ಯಯವಾಗಿದೆ ಎನ್ನುವುದು ಈಗ ಉದ್ಬವಿಸಿರುವ ಪ್ರಮುಖ ಪ್ರಶ್ನೆ.
ಬಾಬಾ ರಾಮ್‌ದೇವ್ ಪತಂಜಲಿ ಯೋಗಪೀಠ ಹೊಸದಿಲ್ಲಿಯಲ್ಲಿ ರವಿವಾರ ಏರ್ಪಡಿಸಿದ್ದ ಯೋಗ ಕಾರ್ಯಕ್ರಮಕ್ಕೆ ತಾನು ಹಣ ಭರಿಸಿಲ್ಲ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
ಆಯೂಷ್ ಸಚಿವಾಲಯದೊಂದಿಗೆ 21 ಯೋಗ ಸಂಸ್ಥೆಗಳು ಈ ವರ್ಷದ ಯೋಗ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಆಯೂಷ್ ಸಚಿವಾಲಯ ಈವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ 20 ಕೋಟಿ ರೂ. ವ್ಯಯಿಸಿದೆ ಎನ್ನಲಾಗಿದೆ.
ಸುಮಾರು ಅರ್ಧದಷ್ಟು ಮೊತ್ತವನ್ನು ಟವಿ, ದಿನಪತ್ರಿಕೆ ಹಾಗೂ ಸಾಮಾಜಿಕ ತಾಣಗಳಲ್ಲಿ ನೀಡಲಾದ ಜಾಹೀರಾತು ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಖರ್ಚುಮಾಡಲಾಗಿದೆ. ಸರಕಾರವು ಟಿ-ಶರ್ಟ್ಸ್, ಕ್ಯಾಪ್ಸ್, ಸಾಮೂಹಿಕ ಯೋಗದಲ್ಲಿ ಭಾಗವಹಿಸಿದ್ದವರಿಗೆ ಮ್ಯಾಟ್‌ನ ವ್ಯವಸ್ಥೆ ಕೂಡ ಮಾಡಿದೆ. ಈ ವರ್ಷ ಖರ್ಚು ಮಾಡಲಾದ 20 ಕೋ. ರೂ.ನಲ್ಲಿ ಭದ್ರತಾ ವೆಚ್ಚ ಹಾಗೂ ಇತರ ರಾಜ್ಯಗಳ ವೆಚ್ಚಗಳು ಇದರಲ್ಲಿ ಸೇರಿಲ್ಲ.
ಆರ್‌ಟಿಐ ಅಂಕಿ-ಅಂಶದ ಪ್ರಕಾರ ಕಳೆದ ವರ್ಷ ನಡೆದ ಮೊದಲ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯೂಷ್ ಸಚಿವಾಲಯ 32.5 ಕೋ.ರೂ. ವ್ಯಯಿಸಿತು