×
Ad

ರೇಪ್ ಸಂತ್ರಸ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಲ್ಮಾನ್ ಖಾನ್‌ಗೆ ಕಾನೂನು ನೋಟಿಸ್

Update: 2016-06-28 10:54 IST

ಹೊಸದಿಲ್ಲಿ,ಜೂ.28: ಇತ್ತೀಚೆಗೆ ರೇಪ್ ಸಂತ್ರಸ್ತರಿಗೆ ನೋವಾಗುವ ರೀತಿ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹರ್ಯಾಣದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತರೊಬ್ಬರು ಕಾನೂನು ನೊಟೀಸ್ ನೀಡಿದ್ದಲ್ಲದೆ, ರೇಪ್ ಸಂತ್ರಸ್ತರ ಮನ ನೋಯಿಸಿದ್ದಕ್ಕೆ 10 ಕೋಟಿ ರೂ. ಪರಿಹಾರ ನೀಡುವಂತೆಯೂ ಆಗ್ರಹಿಸಿದ್ದಾರೆ.

 ನಾಲ್ಕು ವರ್ಷಗಳ ಹಿಂದೆ ಹರ್ಯಾಣದಲ್ಲಿ 10 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯೊಬ್ಬರು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್‌ನ ವಿಳಾದಲ್ಲಿ ತನ್ನ ವಕೀಲರ ಮೂಲಕ ಕಾನೂನು ನೊಟೀಸ್‌ನ್ನು ಶನಿವಾರ ಕಳುಹಿಸಿಕೊಟ್ಟಿದ್ದಾರೆ.

‘ಸುಲ್ತಾನ್’ ಸಿನಿಮಾ ಶೂಟಿಂಗ್‌ನ ವೇಳೆ ತಾನು ಎದುರಿಸಿದ್ದ ಕಷ್ಟದ ಸಂದರ್ಭವನ್ನು ಅತ್ಯಾಚಾರ ಬಲಿಪಶುಗಳಿಗೆ ಹೋಲಿಸುವ ಮೂಲಕ ನಮ್ಮನ್ನು ‘ಜೋಕರ್’ ಆಗಿ ಪರಿಗಣಿಸಿದ್ದಾರೆ ಎಂದು ಹರ್ಯಾಣದ ರೇಪ್ ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ‘ಸುಲ್ತಾನ್’ ಚಿತ್ರದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದ ಸಲ್ಮಾನ್ ರೇಪ್ ಸಂತ್ರಸ್ತರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸ್ವತಹ ಸಲ್ಮಾನ್ ತಂದೆ ಹಾಗೂ ಬರಹಗಾರ ಸಲೀಮ್ ಖಾನ್ ಮಗನ ಹೇಳಿಕೆಗೆ ಕ್ಷಮೆಯಾಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News