ಬೀಫ್ ತಿನ್ನುವ ಚೀನಿಯರ ಮೇಲೆ ಪೊಲೀಸ್ ನಿಗಾ !
Update: 2016-06-28 11:05 IST
ಭೋಪಾಲ್,ಜೂನ್ 28: ಮಧ್ಯಪ್ರದೇಶದ ಸಿಂಗ್ರೋಲ್‌ನ ಸಸಾನ್ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಚೈನೀಸ್ ಪ್ರಜೆಗಳಿಗೆ ಬೀಫ್ ವಿತರಿಸಿದ ಕ್ಯಾಂಟೀನ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವರ್ಷಗಳಿಂದ ಛತ್ತೀಸ್‌ಗಡದಿಂದ ಬೀಫ್‌ನ್ನು ಕಳ್ಳಸಾಗಾಟ ನಡೆಸಿ ಚೈನೀಸ್ ಪ್ರಜೆಗಳಿಗೆ ವಿತರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಕ್ಯಾಂಟಿನ್ ನೌಕರನಿಂದ ಅರುವತ್ತೈದು ಕಿಲೊ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ಬೀಫ್ ತಿನ್ನುವ ಚೈನೀಸ್ ಪ್ರಜೆಗಳ ಮೇಲೆ ಪೊಲೀಸರು ಇದೀಗ ನಿಗಾಇರಿಸಿದ್ದಾರೆ.