×
Ad

ಕಲಬುರಗಿ ರ್ಯಾಗಿಂಗ್ ಪ್ರಕರಣ: ನಾಲ್ಕನೆ ಆರೋಪಿ ಶಿಲ್ಪಾಳ ಕುಟುಂಬ ನಾಪತ್ತೆ !

Update: 2016-06-28 11:22 IST

ಕಡುತ್ತುರುತ್ತಿ,ಜೂನ್ 28: ಕಲಬುರ್ಗಿ ರ್ಯಾಂಗಿಗ್ ಪ್ರಕರಣದ ನಾಲ್ಕನೆ ಆರೋಪಿ ಶಿಲ್ಪಾ.ಸಿ.ಜೋಸ್‌ರ ಕುಟುಂಬ ಭೂಗತವಾಗಿದೆ.ಶಿಲ್ಪಾಳನ್ನು ಹುಡುಕುತ್ತಾ ಕಲಬುರಗಿ ಎಸ್ಪಿ ಶಶಿಕುಮಾರ್ ನೇತೃತ್ವದ ಪೊಲೀಸರ ತಂಡ ಬಂದಿತ್ತು. ಸೋಮವಾರ ಬೆಳಗ್ಗೆ ಕೋತನಲ್ಲೂರ್ ಚಾವಕ್ಕದಲ್ಲಿರುವ ಮನೆಗೆಬಂದಾಗ ಮನೆಗೆ ಬೀಗ ಹಾಕಲಾಗಿತ್ತು. ನೆರೆಹೊರೆಯವರಲ್ಲಿ ವಿಚಾರಿಸಿದಾಗ ಈ ಕುಟುಂಬ ಎಲ್ಲಿಗೆ ಹೋಗಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ನಂತರ ಈ ಕುಟುಂಬದ ಸಂಬಂಧಿಕರ ಕುರಿತ ಮಾಹಿತಿಯನ್ನು ಪೊಲೀಸರು ನೆರೆಯವರಿಂದಲೇ ಸಂಗ್ರಹಿಸಿದ್ದಾರೆ. ರವಿವಾರ ರಾತ್ರಿಯೇ ಅಲ್ಲಿಗೆ ಪೊಲೀಸರು ಬಂದು ತಲುಪಿದ್ದರು. ಅಂದು ರಾತ್ರಿಯೇ ಮನೆಯನ್ನು ಕಂಡು ಹುಡುಕಲಾಗಿದ್ದರೂ ಶಿಲ್ಪಾಳ ಮನೆಗೆ ಬೀಗಹಾಕಿರುವುದನ್ನು ಪೊಲೀಸರು ಖಚಿತ ಪಡಿಸಿ ಸೋಮವಾರ ಬೆಳಗ್ಗೆ ಮನೆಗೆ ಹೋಗಿದ್ದರು. ಮೂರು ದಿವಸಗಳಿಂದ ಮನೆಗೆ ಬೀಗ ಹಾಕಲಾಗಿದೆ ಎಂದು ನೆರೆಯವರು ತಿಳಿಸಿದ್ದಾರೆ. ಆದ್ದರಿಂದ ಸಮೀಪದ ಲಾಡ್ಜ್‌ನಲ್ಲಿ ಉಳಿದುಕೊಂಡು ಪೊಲೀಸರು ಬೆಳಗ್ಗೆ ಶಿಲ್ಪಾಳ ಮನೆಗೆ ಹೋದರೂ ಪ್ರಯೋಜನವಾಗಲಿಲ್ಲ ಕಾರ್ಯಾಚರಣೆಯಲ್ಲಿ ಕರ್ನಾಟಕದ ಪೊಲೀಸರೊಂದಿಗೆ ಕೇರಳ ಪೊಲೀಸ್ ಕೂಡಾ ಕೈಜೋಡಿಸಿದ್ದಾರೆ. ಶಿಲ್ಪಾ ಕುಟುಂಬ ಎಲ್ಲಿಗೆಪರಾರಿಯಾಗಿದೆ ಎಂದು ಸದ್ಯ ಪೊಲೀಸರಿಗೆ ತಿಳಿದು ಬಂದಿಲ್ಲ. ಕೋಟ್ಟಾಯಂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕೆಲವು ದಿವಸಗಳಕಾಲ ಶಿಲ್ಪಾಜೋಸ್‌ಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಕರ್ನಾಟಕದ ಪೊಲೀಸರು ತೊಡಗಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News