×
Ad

ನಾಳೆ ಒಡಿಶಾದಲ್ಲಿ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ

Update: 2016-06-28 22:23 IST


 ಹೊಸದಿಲ್ಲಿ, ಜೂ.28: ಇಸ್ರೇಲ್‌ನ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾದ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯ  ಪರೀಕ್ಷೆ ಒಡಿಶಾ ಕರಾವಳಿಯ ವಾಯುನಲೆಯಲ್ಲಿ ಬುಧವಾರ ನಡೆಯಲಿದೆ. 
ಕ್ಷಿಪಣಿ ಪರೀಕ್ಷೆಗೆ ನಡೆಸಲಾದ ತಯಾರಿ ಅಂತಿಮ ಹಂತದಲ್ಲಿದ್ದು, ಹವಾಮಾನ ಪೂರಕವಾಗಿದ್ದರೆ  ಸಮಗ್ರ ಪರೀಕ್ಷಾ ವಲಯ(ಐಟಿಆರ‍್ )ದಲ್ಲಿ ನಾಳೆ ಕ್ಷಿಪಣಿ ಪರೀಕ್ಷೆ ನಡೆಯಲಿದೆ ಎಂದು ಚಂಡಿಪುರ್‌ನ  ಐಟಿಆರ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭೂಮಿಯಿಂದ ನಭಕ್ಕೆ ಚಿಮ್ಮುವ  ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಸಂದರ್ಭದಲ್ಲಿ ಒಡಿಶಾದ ಕಡಲು ತೀರದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಐಟಿಆರ್‌ನ ಸುತ್ತಲಿನ 2.5 ಕಿ.ಮೀ ವ್ಯಾಪ್ತಿಯ  3652  ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News