ನರ್ಸಿಂಗ್ ವಿದ್ಯಾರ್ಥಿನಿ ಹೇಳಿಕೆ ದಾಖಲು
ಕೊಝಿಕೋಡ್, ಜೂ.28: ಕಲಬುರಗಿ ಅಲ್ ಕಮಾಲ್ ನರ್ಸಿಂಗ್ ಕಾಲೇಜ್‌ನಲ್ಲಿ ಹಿರಿಯ ವಿದ್ಯಾರ್ಥಿನಿಯರಿಂದ ರ್ಯಾಗಿಂಗ್‌ಗೆ ಒಳಗಾದ ಅಶ್ವಥಿ(19) ಎಂಬ ವಿದ್ಯಾರ್ಥಿನಿಯ ಹೇಳಿಕೆಯನ್ನು ಕಲಬುರಗಿ ಡಿವೈಎಸ್ಪಿಜಾಹ್ನವಿ ನೇತೃತ್ವದ ತಂಡದ ಸಮ್ಮುಖದಲ್ಲಿ ಸೋಮವಾರ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ದಾಖಲಿಸಿಕೊಂಡರು.
ಉಸಿರಾಟದ ತೊಂದರೆ ಹಾಗೂ ವಾಂತಿಯಿಂದಾಗಿ ತೀವ್ರ ಸುಸ್ತಾಗಿದ್ದ ನರ್ಸಿಂಗ್ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಳ್ಳಲು ಹಲವು ಗಂಟೆ ಬೇಕಾಯಿತು. ಹಿರಿಯ ವಿದ್ಯಾರ್ಥಿನಿಯರಿಂದ ಕಿರುಕುಳಕ್ಕೆ ಒಳಗಾದ ಈಕೆಗೆ ಬಲವಂತದಿಂದ ಟಾಯ್ಲೆಟ್ ಕ್ಲೀನರ್ ಕುಡಿಸಲಾಗಿತ್ತು. ಮೇ 9ರಂದು ಕಲಬುರಗಿಯ ಅಲ್ ಕಮಾಲ್ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಒಳ ಅಂಗಗಳು ಸಂಪೂರ್ಣ ಹದಗೆಟ್ಟಿವೆ. ಈ ಘಟನೆ ಬಳಿಕ ಆಕೆಯನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆಯ ದೇಹಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ, ಕೇರಳ ವಿದ್ಯಾರ್ಥಿನಿಯೊಬ್ಬಳ ಜೊತೆ ಆಕೆಯನ್ನು ಮನೆಗೆ ಕಳುಹಿಸಲಾಗಿತ್ತು.
ತ್ರಿಶ್ಶೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು.