×
Ad

ಸರಿಯಾಗಿ ವರ್ತಿಸಿ, ಇಲ್ಲದಿದ್ದರೆ ಜೈಲಿಗೆ ಹೋಗಿ.... ಝೀ ನ್ಯೂಸ್‌ ಸಂಪಾದಕರ ವಿರುದ್ಧ ಸುಪ್ರೀಂ ಗರಂ

Update: 2016-06-30 16:13 IST

 ಹೊಸದಿಲ್ಲಿ, ಜೂ.30: "ಸರಿಯಾಗಿ ವರ್ತಿಸಿ ಇಲ್ಲದಿದ್ದರೆ ಜೈಲಿಗೆ ಹೋಗಿ " ಎಂದು ಸುಪ್ರೀಂ ಕೋರ್ಟ್‌ ಇಂದು  ಝೀ ನ್ಯೂಸ್‌ ಸಂಪಾದಕರಾದ ಸುಧೀರ್‌ ಚೌದರಿ ಮತ್ತು ಸಮೀರ‍್ ಅಹ್ಲುವಾಲಿಯಾಗೆ ಎಚ್ಚರಿಕೆ ನೀಡಿದೆ.
ಕೈಗಾರಿಕೊದ್ಯಮಿ ನವೀನ್‌ ಜಿಂದಾಲ್‌ ಅವರಿಂದ 100 ಕೋಟಿ ರೂ.ಗಳ ಹಣ ಸುಲಿಗೆ ಯತ್ನ  ಆರೋಪ ಎದುರಿಸುತ್ತಿರುವ ಸುಧೀರ್‌ ಚೌದರಿ ಮತ್ತು ಸಮೀರ‍್ ಅಹ್ಲುವಾಲಿಯಾಗೆ ಎರಡು ದಿನಗಳ ಒಳಗಾಗಿ ಉತ್ತರ ನೀಡುವಂತೆ ಆದೇಶ ನೀಡಿದೆ.
ಜಾಮೀನು ಪಡೆದಿರುವ ಇಬ್ಬರು ಸಂಪಾದಕರನ್ನು  ನ್ಯಾಯಾಲಯವು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿತು
ಸುಧೀರ್‌ ಚೌದರಿ ಮತ್ತು ಸಮೀರ‍್ ಅಹ್ಲುವಾಲಿಯಾ  ವಿರುದ್ಧ 2012ರಲ್ಲಿ 100 ಕೋಟಿ ರೂ. ಹಣ ಕೇಳಿದರೆಂದು ಜಿಂದಾಲ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಅವರನ್ನು ಈ ಸಂಬಂಧ ಬಂಧಿಸಿದ್ದರೂ ಜಾಮೀನು ಪಡೆದು ಹೊರಬಂದಿದ್ದರು.2014ರ ಗುಜರಾತ್‌ ಸಾರ್ವತ್ರಿಕ  ಚುನಾವಣೆಯಲ್ಲಿ ಬಿಜೆಪಿ ಪರ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಅವರಿಗೆ 2015ರಲ್ಲಿ ಝಡ್‌ ಪ್ಲೆಸ್ ಭದ್ರತೆಯನ್ನು ಗುಜರಾತ್ ಸರಕಾರ ಒದಗಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News