ತಪ್ಪಾಗಿ ಚೀನಾದತ್ತ ಕ್ಷಿಪಣಿ ಹಾರಿಸಿದ ತೈವಾನ್

Update: 2016-07-01 15:54 GMT

ತೈಪೆ (ತೈವಾನ್), ಜು. 1: ತೈವಾನ್ ಮತ್ತು ಚೀನಾಗಳ ನಡುವಿನ ಸಂಬಂಧ ಹದಗೆಡುತ್ತಿರುವ ನಡುವೆಯೇ, ತೈವಾನ್‌ನ ಯುದ್ಧ ನೌಕೆಯೊಂದು ಶುಕ್ರವಾರ ತಪ್ಪಾಗಿ ‘‘ವಿಮಾನವಾಹಕ ನೌಕೆ ಹಂತಕ’’ ಕ್ಷಿಪಣಿಯೊಂದನ್ನು ಚೀನಾದತ್ತ ಉಡಾಯಿಸಿದೆ.
ಕ್ಷಿಪಣಿಯು ಮೀನುಗಾರಿಕಾ ದೋಣಿಯೊಂದಕ್ಕೆ ಬಡಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ನೌಕಾ ಪಡೆ ಹೇಳಿದೆ.
 ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಹಸಿಯಂಗ್-ಫೆಂಗ್ 3 (ಬ್ರೇವ್ ವಿಂಡ್) ಕ್ಷಿಪಣಿಯು ಸುಮಾರು 75 ಕಿಲೋಮೀಟರ್ ದೂರ ಚಿಮ್ಮಿ, ತೈವಾನ್ ಜಲಸಂಧಿಯಲ್ಲಿರುವ ತೈವಾನ್ ಆಡಳಿತಕ್ಕೆ ಒಳಪಟ್ಟ ದ್ವೀಪ ಸಮುಚ್ಚಯ ಪೆಂಗುವಿಗೆ ಒಳಪಟ್ಟ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಗೆ ಬಡಿಯಿತು.
60 ಟನ್ ಭಾರದ ಮೀನುಗಾರಿಕಾ ದೋಣಿಯ ಕ್ಯಾಪ್ಟನ್ ಮೃತಪಟ್ಟರೆ, ದೋಣಿಯಲ್ಲಿದ್ದ ಇತರ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ದಕ್ಷಿಣದ ನಗರ ತ್ಸೋಯಿಂಗ್‌ನಲ್ಲಿರುವ ನೌಕಾ ನೆಲೆಯಲ್ಲಿ ಬೆಳಗ್ಗೆ 8.10ರ ವೇಳೆಗೆ ಅಭ್ಯಾಸ ನಡೆಯುತ್ತಿದ್ದಾಗ, 500 ಟನ್ ಭಾರದ ಕ್ಷಿಪಣಿ ಉಡಾವಕ ಹಡಗಿನಿಂದ ಕ್ಷಿಪಣಿ ಹಾರಿತು ಹಾಗೂ ಅದು ಚೀನಾದತ್ತ ಸಾಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News