×
Ad

ರಾಷ್ಟ್ರಪತಿ ಇಫ್ತಾರ್‌ ಕೂಟಕ್ಕೆ ಸತತ ಮೂರನೆ ವರ್ಷ ಪ್ರಧಾನಿ ಮೋದಿ ಗೈರು

Update: 2016-07-03 11:19 IST

ಹೊಸದಿಲ್ಲಿ, ಜು.3: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಏರ್ಪಡಿಸಿದ್ದ ಇಫ್ತಾರ್‌ ಕೂಟದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಪ್ಪಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ  ಸತತ ಮೂರನೆ ವರ್ಷ ಇಫ್ತಾರ್‌ ಕೂಟಕ್ಕೆ ಗೈರು ಹಾಜರಾಗುವ ಮೂಲಕ ಗಮನ ಸೆಳೆದಿದ್ದಾರೆ.
ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಶುಕ್ರವಾರ ಸಂಜೆ ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಮ್‌ ನಬಿ ಅಝಾದ್‌, ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್‌ ಅಬ್ಬಾಸ್‌ ನಕ್ವಿ, ಶೀಲಾ ದೀಕ್ಷಿತ್‌, ಸೀತಾರಾಮ ಯೆಚೂರಿ  ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಹರಿಯ ಅಧಿಕಾರಿಗಳು ಧಾರ್ಮಿಕ ಮುಖಂಡರು, ರಾಜತಾಂತ್ರಿಕರು, ಹಲವು ಪ್ರಮುಖರು ಭಾಗವಹಿಸಿದ್ದರು.
 ಪ್ರಧಾನಿ ಮೋದಿ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸದೆ ಇರುವ ವಿಚಾರ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. 
ಮೋದಿ ಇಫ್ತಾರ‍್ ಕೂಟಕ್ಕೆ ಗೈರು ಹಾಜರಾಗಿರುವ ವಿಚಾರದ ಬಗ್ಗೆ ಟ್ವಿಟ್‌ ಮಾಡಿರುವ ಪತ್ರಕರ್ತ ಶ್ವೇತಾ ಚತುರ್ವೆದಿ " ಪ್ರಧಾನ ಮಂತ್ರಿ ಸಂವಿಧಾನ  ಮತ್ತು  ರಾಷ್ಟ್ರಪತಿಗೆ ಅಗೌರವ ತೋರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಶೇ 16ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸಲ್ಮಾನರನ್ನು ಅವಮಾನಿಸಿದ್ದಾರೆ”  ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೂರನೆ ಬಾರಿ ದೇಶದ ಪ್ರಥಮ ಪ್ರಜೆ ನೀಡಿರುವ ಆಹ್ವಾನವನ್ನು ಮೋದಿ ತಿರಸ್ಕರಿಸಿದ್ದಾರೆ.  ಪವಿತ್ರ ರಂಝಾನ್‌ ಉಪವಾಸ ನಿರತ ಮುಸಲ್ಮಾನರನ್ನು ಕಡೆಗಣಿಸಿದ್ದಾರೆ ಎಂದುಶ್ವೇತಾ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News