×
Ad

ಹೆಮ್ಮೆಯಿಂದ ಬೀಗುತ್ತಿರುವ ಬ್ರಹ್ಮಪುರ

Update: 2016-07-04 00:03 IST

ಬ್ರಹ್ಮಪುರ(ಒಡಿಶಾ),ಜು.3: ಭಾರತೀಯ ವಾಯುಪಡೆಯಲ್ಲಿ ದೇಶಿ ನಿರ್ಮಿತ ಲಘು ಯುದ್ಧವಿಮಾನ ‘ತೇಜಸ್’ನ ಸೇರ್ಪಡೆ ಒಡಿಶಾದ ಜನರಿಗೆ ವಿಶೇಷ ಸಂಭ್ರಮವನ್ನು ತಂದಿದೆ. ತೇಜಸ್‌ನ ಮುಖ್ಯ ವಿನ್ಯಾಸಕ ಕೋಟಾ ಹರಿನಾರಾಯಣ ಅವರು ಮೂಲತಃ ಬ್ರಹ್ಮಪುರದವರಾಗಿದ್ದಾರೆ.

ತೇಜಸ್ ಅನ್ನು ವಿನ್ಯಾಸಗೊಳಿಸಲು ನಾವು ಎರಡು ದಶಕಗಳಿಗೂ ಅಧಿಕ ಕಾಲ ಶ್ರಮಿಸಿದ್ದೆವು. ನಮ್ಮ ಕಠಿಣ ದುಡಿಮೆ ಕೊನೆಗೂ ಫಲ ನೀಡಿದೆ. ತೇಜಸ್ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದೆ. ವಾಯುಪಡೆಯು ಅದನ್ನು ಸಂಪೂರ್ಣವಾಗಿ ಬಳಸಿಕೊಂಡರೆ ನನಗೆ ನಿಜಕ್ಕೂ ಖುಷಿಯಾಗಲಿದೆ ಎಂದು ಬೆಂಗಳೂರಿನಿಂದ ದೂರವಾಣಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹರಿನಾರಾಯಣ ಹೇಳಿದರು.ಸದಿಂದ ಆಗಸಕ್ಕೆ ಮತ್ತು ಆಗಸದಿಂದ ಭೂಮಿಗೆ ಚಿಮ್ಮುವ ಕ್ಷಿಪಣಿಗಳು ಮತ್ತು ಹಡಗು ನಿಗ್ರಹ ಕ್ಷಿಪಣಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ತೇಜಸ್ ಹೊಂದಿದೆ. ಗೋಚರ ವ್ಯಾಪ್ತಿಯನ್ನೂ ಮೀರಿ ಶತ್ರುವಿಮಾನವನ್ನು ಅದು ಪತ್ತೆ ಹಚ್ಚಬಲ್ಲುದು ಮತ್ತು ಗಡಿಯಾಚೆ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸಬಲ್ಲುದು ಎಂದರು.

ತೇಜಸ್ ಚೀನಾ ಮತ್ತು ಪಾಕಿಸ್ತಾನಗಳಂತಹ ಇತರ ರಾಷ್ಟ್ರಗಳ ಯಾವುದೇ ಯುದ್ಧವಿಮಾನಕ್ಕಿಂತ ಉತ್ತಮವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅದನ್ನು ರೂಪಿಸಲಾಗಿದೆ. ಖರಗಪುರ, ಕಾನಪುರ ಮತ್ತು ಬಾಂಬೆ ಐಐಟಿಗಳಂತಹ ಸುಮಾರು 20 ಶಿಕ್ಷಣ ಸಂಸ್ಥೆಗಳು, 40 ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು 500ಕ್ಕೂ ಅಧಿಕ ಇಂಜಿನಿಯರ್‌ಗಳು ದೇಶಿಯ ವಿಮಾನವನ್ನು ಅಭಿವೃದ್ಧಿಗೊಳಿಸಲು ವರ್ಷಗಳ ಕಾಲ ಶ್ರಮಿಸಿದ್ದಾರೆ. ಹೆಚ್ಚಿನ ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದ್ದು, ಕೆಲವೇ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದರು. ಹರಿನಾರಾಯಣ ಈಗ ಬೆಂಗಳೂರಿನಲ್ಲಿ ವಾಸವಾಗಿದ್ದರೂ ಹುಟ್ಟೂರು ಬ್ರಹ್ಮಪುರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.

ಲೈಂಗಿಕ ಕಿರುಕುಳ ದೂರುಜೆಎನ್‌ಯು ವಿದ್ಯಾರ್ಥಿನಿಯ ಅಮಾನತಿಗೆ ಹೈಕೋರ್ಟ್ ತಡೆಹೊಸದಿಲ್ಲಿ, ಜು.3: ಹಾಸ್ಟೆಲ್ ವಾರ್ಡನ್ ಒಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳ ಅಮಾನತಿಗೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಿರ್ಣಯ ಕೈಗೊಳ್ಳುವ ವೇಳೆ ವಿಶ್ವವಿದ್ಯಾನಿಲಯವು ನಿಗದಿತ ಪ್ರಕ್ರಿಯೆಯನ್ನು ಅನುಕರಿಸಿಲ್ಲವೆಂದು ಅದು ಹೇಳಿದೆ.

ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲು ವಿದ್ಯಾರ್ಥಿನಿಗೆ ವಿವಿ ಸಾಕಷ್ಟು ಕಾಲಾವಕಾಶ ನೀಡಿಲ್ಲ. ಆದೇಶವನ್ನು ವಿಚಾರಣೆ ನಡೆಸದೆಯೇ ನೀಡಿರುವಂತೆ ತೋರುತ್ತಿದೆ ಎಂದಿರುವ ನ್ಯಾಯಮೂರ್ತಿ ಸಂಜೀವ ಸಚ್‌ದೇವ್, ವಿದ್ಯಾರ್ಥಿನಿಯನ್ನು ಒಂದು ಸೆಮಿಸ್ಟರ್‌ಗೆ ಅಮಾನತುಗೊಳಿಸುವ ವಿವಿಯ ಮೇ 30ರ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ಲೈಂಗಿಕ ಕಿರುಕುಳದ ವಿರುದ್ಧ ಲಿಂಗ ಜಾಗೃತಿ ಸಮಿತಿಯ (ಜಿಎಸ್‌ಸಿಎಎಸ್‌ಎಚ್) ವರದಿಯೊಂದರ ಪ್ರಕಾರ ವಿದ್ಯಾರ್ಥಿನಿಯನ್ನು ಒಂದು ಸೆಮಿಸ್ಟರ್‌ಗೆ ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆಕೆ ವಾರ್ಡನ್ ವಿರುದ್ಧ ನೀಡಿರುವ ದೂರು ಸುಳ್ಳೆಂದು ಸಮಿತಿ ವರದಿ ನೀಡಿತ್ತು. ನ್ಯಾಯಾಲಯವು ವಿದ್ಯಾರ್ಥಿನಿಯ ಮನವಿಯ ಮೇರೆಗೆ ವಿವಿಗೆ ನೋಟಿಸ್ ಜಾರಿಗೊಳಿಸಿದ್ದು, ಉತ್ತರಿಸುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News