×
Ad

ಗುಜರಾತ್: ಊರಿಗೆ ನುಗ್ಗಿದ ಸಿಂಹಗಳು!

Update: 2016-07-13 22:10 IST

ಅಹ್ಮದಾಬಾದ್, ಜು.13: ಗುಜರಾತ್‌ನ ಪಟ್ಟಣವೊಂದರ ಬೀದಿಗಳಲ್ಲಿ 8 ಸಿಂಹಗಳು ತಿರುಗಾಡುತ್ತಿದ್ದ ವೀಡಿಯೊ ಒಂದು ಮಂಗಳವಾರ ರಾತ್ರಿ ವಾಟ್ಸ್‌ಆ್ಯಪ್‌ನಲ್ಲಿ ಗಿರಕಿ ಹೊಡೆದ ಬಳಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಎರಡು ಮರಿಗಳನ್ನೊಳಗೊಂಡ ಸಿಂಹಗಳ ಗುಂಪೊಂದು ಅಹ್ಮದಾಬಾದ್‌ನಿಂದ ಸುಮಾರು 300 ಕಿ.ಮೀ. ದೂರದ ಜುನಾಗಡ ಪಟ್ಟಣದ ವಸತಿ ಪ್ರದೇಶದ ಬಳಿಕ ಕಾಣಿಸಿಕೊಂಡಿತ್ತು.
ಪ್ರತ್ಯೇಕ ಘಟನೆಯೊಂದರಲ್ಲಿ ಗೀರ್ ಸಿಂಹ ಧಾಮಕ್ಕೆ ಹತ್ತಿರದ ಅಮ್ರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ತನ್ನ ಆಡುಗಳನ್ನು ಮೇಯಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಮೂರು ಸಿಂಹಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಮಾರ್ಚ್‌ನಿಂದ ಮೇಯವರೆಗೆ ಇದೇ ಪ್ರದೇಶದಲ್ಲಿ ಸಿಂಹಗಳ ದಾಳಿಯಿಂದ ಮೂವರು ಸಾವಿಗೀಡಾಗಿದ್ದರು. ಗೀರ್ ಸೋಮನಾಥ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಸಿಂಹ ಕೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News