×
Ad

50ವರ್ಷದ ಮಹಿಳೆ, 45 ವರ್ಷದ ವ್ಯಕ್ತಿಯ ಪ್ರೇಮ ಪ್ರಸಂಗ: ಥಳಿಸುವ ಶಿಕ್ಷೆ ಜಾರಿಗೊಳಿಸಿದ ಖಾಪ್ ಪಂಚಾಯತ್!

Update: 2016-07-14 15:31 IST

ಛೋಟಾಉದೇರ್‌ಪುರ್, ಜುಲೈ 14: ಗುಜರಾತ್‌ನ ಆದಿವಾಸಿ ಪ್ರಾಬಲ್ಯದ ಛೋಟಾಉದೇಪುರ್ ಜಿಲ್ಲೆಯ ಮಾಣಿಬಿಲ್ಲಿ ಎಂಬಲ್ಲಿ ಐವತ್ತುವರ್ಷದ ಮಹಿಳೆ ಮತ್ತು 45 ವರ್ಷದ ಪುರುಷನ ನಡುವೆ ಪ್ರೇಮ ಅಂಕುರಿಸಿತ್ತು. ಇದು ಖಾಫ್ ಪಂಚಾಯತ್‌ನ ಗಮನಕ್ಕೆ ಬಂದಾಗ ಅದು ಅವರಿಬ್ಬರಿಗೂ ಬಹಿರಂಗವಾಗಿ ಚಾಟಿ ಮತ್ತು ಕೋಲುಗಳಿಂದ ಬರ್ಬರವಾಗಿ ಹೊಡೆಯುವ ಶಿಕ್ಷೆ ಜಾರಿಗೊಳಿಸಿದ್ದು ಈ ಘಟನೆಯ ದೃಶ್ಯಗಳು ಈಗ ಬಹಿರಂಗೊಂಡಿದೆ ಎಂದು ವರದಿಯಾಗಿದೆ.

45ವರ್ಷದ ಗ್ರಹಸ್ಥ ವ್ಯಕ್ತಿ ನೆರೆಯ ಐವತ್ತು ವರ್ಷದ ಗ್ರಹಿಣಿಯ ಜೊತೆ ಪರಾರಿಯಾಗಿದ್ದ. ಇಬ್ಬರಿಗೂ ಮಕ್ಕಳಿವೆ. ಅವರನ್ನು ಕುಟುಂಬದವರು ಸೌರಾಷ್ಟ್ರದಲ್ಲಿ ಹಿಡಿದು ತಂದು ಪಂಚಾಯತ್‌ಗೆ ಒಪ್ಪಿಸಿದ್ದರು. ಪಂಚಾಯತ್ ಅವರಿಗೆ ಚಾಟಿಯೇಟಿನ ಶಿಕ್ಷೆ ವಿಧಿಸಿತ್ತು. ಈ ಘಟನೆ ನಡೆದು ಇಪ್ಪತ್ತು ದಿವಸಗಳು ಕಳೆದಿದ್ದು ಅವರಿಗೆ ಹೊಡೆಯುತ್ತಿರುವ ದೃಶ್ಯಗಳಿರುವ ವೀಡಿಯೋ ಇದೀಗ ವೈರಲ್ ಆದ ನಂತರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇವರನ್ನು ಥಳಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News