ಟ್ವಿಟ್ಟರ್ ನಲ್ಲೇ ಮೋದಿ, ರಾಹುಲ್ , ಕೇಜ್ರಿವಾಲ್ ಅವರ ಅಪಾಯಿಂಟ್ ಮೆಂಟ್ ಕೇಳಿದ ಇರ್ಫಾನ್ ಖಾನ್

Update: 2016-07-17 11:58 GMT

ಹೊಸದಿಲ್ಲಿ, ಜು. 17: ಖ್ಯಾತ ನಟ ಇರ್ಫಾನ್ ಖಾನ್ ಅವರು ಶನಿವಾರ ಟ್ವಿಟ್ಟರ್ ಮೂಲಕ ದೇಶದ ಅತ್ಯಂತ ಬಿಝಿ ಹಾಗೂ ಅಷ್ಟೇ ಖ್ಯಾತ ಮೂವರು ಗಣ್ಯರನ್ನು ಭೇಟಿಯಾಗಲು ಅವಕಾಶ ಕೇಳಿದರು. ಆದರೆ ಅದಕ್ಕೆ ಅವರು ಬಳಸಿದ ವಿಧಾನ ವಿಭಿನ್ನವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ' ದೇಶದ ಸಾಮಾನ್ಯ ಪ್ರಜೆಯಾಗಿ ಕೆಲವು ಪ್ರಶ್ನೆ ಕೇಳಲು ' ಬಯಸಿದ್ದರು ಇರ್ಫಾನ್. ಅದಕ್ಕಾಗಿ ಅವರು ಈ ಮೂವರು ಗಣ್ಯರ ಕಚೇರಿಯನ್ನು ಸಂಪರ್ಕಿಸಲಿಲ್ಲ. ಟ್ವಿಟ್ಟರ್ ನಲ್ಲಿ ಸದಾ ಲಭ್ಯವಿರುವ ಈ ಮೂವರನ್ನು ನೇರವಾಗಿ ಟ್ವಿಟ್ಟರ್ ಮೂಲಕವೇ ಇರ್ಫಾನ್ ಸಂಪರ್ಕಿಸಿ, ಭೇಟಿಗೆ ಅವಕಾಶ ಕೇಳಿದ್ದರು. 

ಕೇಜ್ರಿವಾಲ್ ತಕ್ಷಣ ಪ್ರತಿಕ್ರಿಯೆ ನೀಡಿ ಭೇಟಿಯಾಗಲು ಸಮಯಾವಕಾಶ ನೀಡಿದರು. ರಾಹುಲ್ ಕೂಡ ತಡಮಾಡದೆ " ನಿಮ್ಮ ಫೋನ್ ನಂಬರ್ ಕೊಡಿ . ಭೇಟಿಯಾಗುವ " ಎಂದು ಪ್ರತಿಕ್ರಿಯೆ ನೀಡಿದರು. ಆದರೆ ಪ್ರಧಾನಿ ಮಾತ್ರ " ಈಗ ಬಿಝಿ ಇರುವುದರಿಂದ ಕಚೇರಿಗೆ ಪತ್ರ ಬರೆಯಿರಿ" ಎಂದು ಪ್ರತಿಕ್ರಿಯೆ ನೀಡಿದರು. ಅದಕ್ಕೆ ಪತ್ರ ಬರೆಯಲು ಇಮೇಲ್ ಐಡಿ ಕೇಳಿದರು ಇರ್ಫಾನ್. 

ಮೂವರಿಗೂ ಅವರು ಕೇಳಿದ ಪ್ರಶ್ನೆ ಹಾಗೂ ಅವರಿಗೆ ಸಿಕ್ಕಿದ ಉತ್ತರ ನೋಡಿ  : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News