ಉತ್ತರಪ್ರದೇಶದಲ್ಲಿ ವಿಷಮದ್ಯ ದುರಂತ : 17 ಮಂದಿ ಮೃತ್ಯು, 14 ಮಂದಿ ಗಂಭೀರ

Update: 2016-07-17 13:02 GMT

   ಪಾಟ್ನಾ/ಲಕ್ನೊ,ಜುಲೈ 17: ಉತ್ತರ ಪ್ರದೇಶದ ಅಲಿಗಂಜ್‌ನಲ್ಲಿ ವಿಷ ಮದ್ಯ ಸೇವಿಸಿ ಹದಿನೇಳು ಮಂದಿ ಮೃತರಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ 14 ಮಂದಿಯನ್ನು ಸೈಫಯಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆಎಂದು ವರದಿಯಾಗಿದೆ. ಸರಕಾರ ಈ ಘಟನೆಗೆ ಸಂಬಂಧಿಸಿ ಮೂವರು ಅಧಿಕಾರಿಗಳ ಸಹಿತ 12 ಮಂದಿಯನ್ನು ಅಮಾನುತುಗೊಳಿಸಿದೆ. ವಿಷಮದ್ಯಸೇವನೆಯಿಂದ ಸಂಭವಿಸಿದ ಸಾವುನೋವನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸಿದ್ದು ಅದು ಅಲಿಗಂಜ್‌ನ ಉಪಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಅಧಿಕಾರಿ, ಅಬಕಾರಿ ನಿರೀಕ್ಷಕರು ಹಾಗೂ ಪೊಲೀಸ್ ಅಧೀಕ್ಷಕರ ಸಹಿತ ಹನ್ನೆರಡು ಮಂದಿಯನ್ನು ತಕ್ಷಣದಿಂದ ಅಮಾನತ್ ನಲ್ಲಿಟ್ಟಿದೆ ಎಂದು ವರದಿ ತಿಳಿಸಿದೆ.

ಉತ್ತರಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ದೀಪಕ್ ಸಿಂಘಾಲ್ ತಿಳಿಸಿರುವ ಪ್ರಕಾರ ಈ ಮೂವರು ಅಧಿಕಾರಿಗಳಲ್ಲದೆ, ಅಬಕಾರಿ ನಿರೀಕ್ಷಕ, ಅಲಿಗಂಜ್ ಠಾಣಾಧಿಕಾರಿ ಮತ್ತು ಅಬಕಾರಿ ವಿಭಾಗದ ಒಬ್ಬ ಪೇದೆಯನ್ನೂ ಅಮಾನತು ಗೊಳಿಸಲಾಗಿದೆ. ಅಬಕಾರಿ ಆಯುಕ್ತ ಹಾಗೂ ಜಂಟಿ ಆಯುಕ್ತರನ್ನು ಘಟನಾ ಸ್ಥಳಕ್ಕೆ ಹೋಗಲು ಸೂಚಿಸಲಾಗಿದೆ. ಸರಕಾರ ಅಧಿಕಾರಿಗಳ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಧಿಕಾರಿಗಳು ಕರ್ತವ್ಯಲೋಪವೆಸಗಿ ಕಾನೂನು ಕ್ರಮಗಳಿಂದ ಪಾರಾಗುವ ಪ್ರಶ್ನೆಯೇ ಇಲ್ಲ ಎಂದು ದೀಪಕ್ ಸಿಂಘಾಲ್ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News