ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅಸಮರ್ಥರು: ಬಾಲಿವುಡ್ ನಟ ಓಂ ಪುರಿ

Update: 2016-07-18 10:27 GMT

 ಕಾನ್ಪುರ,ಜುಲೈ 18: ಹೇಳಿಕೆಗಳನ್ನು ನೀಡುವುದರಲ್ಲಿ ಪ್ರಸಿದ್ಧರಾದ ಬಾಲಿವುಡ್ ನ ಓಂಪುರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಲು ಈಗ ಅಸಮರ್ಥರು ಎಂದು ಹೇಳಿದ್ದಾರೆಂದು ವೆಬ್ ಪೋರ್ಟಲೊಂದು ವರದಿ ಮಾಡಿದೆ. ಅವರಿಗಿನ್ನೂ ರಾಜಕೀಯದಲ್ಲಿ ತರಬೇತಿ ಆಗಬೇಕಾಗಿದೆ ಎಂದು ಕಾನ್ಪುರದಲ್ಲಿ ನಡೆಯುತ್ತಿರುವ ಚಿತ್ರ ಹಬ್ಬಕ್ಕೆ ಬಂದಿದ್ದ ಓಂಪುರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಆರ್ಥಶಾಸ್ತ್ರಜ್ಞ ಮನ್‌ಮೋಹನ್ ಸಿಂಗ್‌ರನ್ನು ಪ್ರಧಾನಿ ಮಾಡಿ ಅವರ ವರ್ಚಸ್ಸಿಗೆ ಹಾನಿ ಮಾಡಿದೆ. ಅವರ ಅಧಿಕಾರವಧಿಯಲ್ಲಿ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಹಗರಣವನ್ನು ಪಕ್ಷ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಜರಗಿಸಲಾಯಿತು. ಆದರೆ ಕಳೆಕೊಂಡಿದ್ದ ಹಣವನ್ನು ವಾಪಸು ಪಡೆಯುವ ಕುರಿತು ಯಾರೂ ಯೋಚಿಸಲಿಲ್ಲ ಎಂದು ಓಂ ಪುರಿಹೇಳಿದ್ದಾರೆ ಎಂದು ವರದಿಯಾಗಿದೆ. ಅಂದು ಮನ್‌ಮೋಹನ್ ಸಿಂಗ್‌ರನ್ನು ಪ್ರಧಾನಿ ಮಾಡುವ ಬದಲು ಸಲ್ಮಾನ್ ಖುರ್ಷಿದ್‌ರನ್ನು ಪ್ರಧಾನಿ ಮಾಡಬಹುದಾಗಿತ್ತು. ಶೇ.22ರಷ್ಟು ಜನರು ಈ ನಿರ್ಧಾರವನ್ನು ಬೆಂಬಲಿಸುತ್ತಿದ್ದರು. ಇಡೀ ದೇಶದಲ್ಲಿ ಸಕಾರಾತ್ಮಕ ಪರಿಸ್ಥಿತಿ ನೆಲೆಸುತಿತ್ತು ಎಂದು ಪುರಿ ಅಭಿಪ್ರಾಯ ಪ್ರಕಟಿಸಿದರು ಎನ್ನಲಾಗಿದೆ.

ಕಾಂಗ್ರೆಸ್‌ನಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂತು:

ಕಾಂಗ್ರೆಸ್‌ನಿಂದ ಜಿಗುಪ್ಸೆಗೊಂಡ ನಕಾರಾತ್ಮಕ ವೋಟುಗಳಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು ಓಂಪುರಿ, ಬಿಜೆಪಿ ಸರಕಾರ ಶೌಚಾಲಯ ಕಟ್ಟಿಸುತ್ತಿದೆ. ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದರೆ ಸ್ವಲ್ಪಯೋಚಿಸಿ, ನೀರೇ ಇಲ್ಲದಿದ್ದರೆ ಶೌಚಾಲಯವನ್ನು ಶುಚಿಯಾಗಿಡುವುದು ಹೇಗೆ? ಹಾಗೂ ಮುನ್ಸಿಪಾಲಿಟಿಯಜನರು ಕೊಳಕು ಎತ್ತದಿದ್ದರೆ ಕೊಳಕು ಹಾಗೆಯೆ ಉಳಿಯುತ್ತದೆ ಎಂದಿದ್ದಾರೆ.

ಕೆಲವು ಜನರು ಇಸ್ಲಾಮ್‌ಗೆ ಕೆಟ್ಟ ಹೆಸರು ತರುತ್ತಿದ್ದಾರೆ:

ಪಾಕಿಸ್ತಾನದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಓಂ ಪುರಿ "ನಾನು ಎರಡು ಬಾರಿ ಕರಾಚಿಗೆ ಹೋಗಿದ್ದೇನೆ. ಪಾಕಿಸ್ತಾನದ ಜನರು ನನ್ನ ಸಿನೆಮಾ ನೋಡುತ್ತಾರೆ. ನನಗೆ ಅವರು ಕೆಟ್ಟವರೆಂದು ಅನಿಸುವುದಿಲ್ಲ. ದುಷ್ಟ ತತ್ವಗಳು ಎರಡೂ ಕಡೆಗಳಲ್ಲಿವೆ. ಭಾರತದಲ್ಲಿ ಲಾಠಿ, ದಂಡ ಹಿಡಿಯುವವರಿದ್ದರೆ, ಪಾಕಿಸ್ತಾನದಲ್ಲಿ ಆರ್‌ಡಿಎಕ್ಸ್.ಏಕೆ 57 ಹಿಡಿಯುವವರಿದ್ದಾರೆ. ಪಾಕಿಸ್ತಾನದ ಬಗ್ಗೆ ನನಗೆ ಕನಿಕರ ಮೂಡುತ್ತದೆ.ತಮ್ಮ ಜನರನ್ನು ಸೇನೆಗೆ ಸೇರಲು ಒತ್ತಾಯಿಸದಿದ್ದರೆ ಅಲ್ಲಿನ ರಾಜಕೀಯದ ಮಂದಿಯ ಮನೋಸ್ಥೈರ್ಯ ಗಟ್ಟಿಯಾಗಬಹುದು ಹಾಗೂ ಖಂಡಿತವಾಗಿಯೂ ಅಲ್ಲಿನ ಪರಿಸ್ಥಿತಿಬದಲಾಗುವುದು ಹಾಗೂ ಭಯೋತ್ಪಾದನೆ ನಿಲ್ಲುವುದು ಎಂದು ಓಂಪುರಿ ಹೇಳಿದ್ದಾರೆ.

 ಕಾಶ್ಮೀರದ ವಿಷಯವನ್ನೇ ಪಾಕಿಸ್ತಾನ ಬಿಟ್ಟುಬಿಡಬೇಕು:

ಕಾಶ್ಮೀರದಲ್ಲಿ ಈಗಿನ ಸ್ಥಿತಿಗತಿಗಳ ಕುರಿತು ಮಾತಾಡಿದ ಓಂಪುರಿ "ರಾಜಾ ಹರಿಸಿಂಗ್‌ರು ಭಾರತದ ಸಹಾಯ ಕೇಳಿದ್ದರು. ಅದರೆ ಅಷ್ಟರಲ್ಲಿ ಕೆಲವು ಭಾಗಗಳಿಗೆ ಪಾಕಿಸ್ತಾನ ನುಸುಳಿಯಾಗಿತ್ತು. ಶಾಂತಿಗಾಗಿ ಪಾಕಿಸ್ತಾನ ಕಾಶ್ಮೀರವನ್ನು ಬಿಟ್ಟುಬಿಡಬೇಕಾಗಿದೆ. ಯಾಕೆಂದರೆ ಭಾರತ ಯಾವುದೋ ಸಣ್ಣಪುಟ್ಟ ರಾಷ್ಟ್ರವಲ್ಲ. ಬಹುದೊಡ್ಡ ಶಕ್ತಿಯೊಂದಿಗೆ ಗುದ್ದಾಡುತ್ತಿರುವ ಜನರಿಗೆ ಉದ್ಯೋಗಕ್ಕಾಗಿ ಪ್ಯಾಕ್ಟರಿ ತೆರೆಯಬೇಕಾಗಿದೆ. ಗದ್ದೆ ಕೆಲಸ ಮಾಡಿಸಬೇಕಾಗಿದೆ. ಇದರಿಂದಾಗಿ ಜನರು ಬಂದೂಕು ಹಿಡಿಯುವುದನ್ನು ಬಿಟ್ಟುಬಿಡಲಿದ್ದಾರೆ" ಎಂದು ಹೇಳಿದರೆನ್ನಲಾಗಿದೆ.

ರಾಜಕೀಯ ಪ್ರವೇಶಿಸಲು ಸಿದ್ಧನಿದ್ದೇನೆ:

 ರಾಜಕೀಯ ಪ್ರವೇಶಿಸುವಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓಂಪುರಿ ರಾಜಕೀಯಕ್ಕೆ ಬರಲು ಸಿದ್ಧ ಆದರೆ ಭ್ರಷ್ಟಾಚಾರ ಮತ್ತು ಇತರ ವಿಷಯಗಳಲ್ಲಿ ತನ್ನ ಬಾಯಿಮುಚ್ಚಿಸುವ ಶರ್ತದ ರಾಜಕೀಯವನ್ನು ತಾನು ಮಾಡಲಾರೆ ಎಂದಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News