ಹಫೀಝ್ ಸಯೀದ್ ಗೆ ಸವಾಲು ಹಾಕಿದ ಬಾಲಕಿ ಜಾಹ್ನವಿ

Update: 2016-07-23 10:34 GMT

ಲೂಧಿಯಾನ , ಜು. 23 : ಈ ಹಿಂದೆ ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದ ಲುಧಿಯಾನದ 15 ವರ್ಷದ ಬಾಲಕಿ ಜಾಹ್ನವಿ ಬೆಹಲ್ ಮತ್ತೆ ಸುದ್ದಿಯಲ್ಲಿದ್ದಾಳೆ. ಈ ಬಾರಿ ಲಷ್ಕರೆ ತೊಯ್ಬಾದ ಹಫೀಝ್ ಸಯೀದ್ ಗೆ ಸವಾಲು ಹಾಕಿರುವ  ಆಕೆ  ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸುವುದಾಗಿ ಹೇಳಿದ್ದಾಳೆ. ಹಫೀಝ್ ಕಾಶ್ಮೀರಿಗಳಲ್ಲಿ ಭಯ ಸೃಷ್ಟಿಸುವುದನ್ನು ಹಾಗೂ ವಿಭಜನೆಯ ನೀತಿಯನ್ನು ಬಿಡಬೇಕು ಎಂದು ಜಾಹ್ನವಿ ಹೇಳಿದ್ದಾಳೆ. 

" ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಎಲ್ಲ ಸಂಸದರು ತಮ್ಮ ಕ್ಷೇತ್ರಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಿದ್ದಾರೆ. ಅವರಂತಹ ' ಶ್ರೇಷ್ಠ ' ಪ್ರಧಾನಿ ಮಾತ್ರ ಹೀಗೆ ಮಾಡಬಲ್ಲರು. ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿರುವ ಶ್ರೀನಗರದ ಲಾಲ್ ಚೌಕ್ ನಲ್ಲಿ ನಾನು ಆಗಸ್ಟ್ 15 ರಂದು ಧ್ವಜಾರೋಹಣ ಮಾಡುತ್ತೇನೆ . ಇದು ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನೀಯರಿಗೆ ನನ್ನ ಸವಾಲು " ಎಂದು ಜಾಹ್ನವಿ ಹೇಳಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News