×
Ad

ಕಾಸರಗೋಡಿಗೆ ವಿಲಾಸಿ ರೋಲ್ಸ್ ರಾಯ್ಸ್ ತರಲಿದ್ದಾರೆ ಯುವ ಉದ್ಯಮಿ ಯೂಸುಫ್

Update: 2016-07-28 11:57 IST

ಕಾಸರಗೋಡು,ಜುಲೈ 28: ಪ್ರಪಂಚದ ಅತ್ಯಂತ ವಿಲಾಸಿ ಕಾರು ಬ್ರಾಂಡ್‌ಗಳಲ್ಲಿ ಒಂದಾದ ರೋಲ್ಸ್‌ರಾಯ್ಸ್ ಕಾರು ಕಾಸರಗೋಡಿಗೂ ಬರಲಿದೆ. ಯುವ ಉದ್ಯಮಿ ಮತ್ತು ಯು.ಕೆ, ಗ್ರೂಪ್ ಅಧ್ಯಕ್ಷ ಯು.ಕೆ. ಯೂಸುಫ್ ಈ ಕಾರನ್ನು ಖರೀದಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹತ್ತುಕೋಟಿ ರೂಪಾಯಿ ರೋಲ್ಸ್‌ರಾಯ್ಸ್ ಕಾರಿನ ಸರಾಸರಿ ಬೆಲೆಯಾಗಿದೆ. ಅದ್ದೂರಿತನ ಮತ್ತು ಸದೃಢತೆಗೆ ಹೆಸರುವಾಸಿಯಾದ ರೋಲ್ಸ್‌ರಾಯ್ಸ್ ಕಾರುಗಳು ಯಾವತ್ತು ಶತಕೋಟಿಶ್ವರರ ನೆಚ್ಚಿನ ವಾಹನವಾಗಿದೆ. ಆದ್ದೂರಿ ಕಾರುಗಳ ಮಾರುಕಟ್ಟೆಯಲ್ಲೇ ರೋಲ್ಸ್‌ರಾಯ್ಸ್ ಕಾರುಗಳು ಸದಾ ಉನ್ನತ ಸ್ಥಾನದಲ್ಲಿವೆ. ಅದ್ದೂರಿತನ ಮತ್ತು ಹೊಸ ತಂತ್ರಜ್ಞಾನಗಳನನ್ನು ಹೊಂದಿರುವ ಕಾರಿನಲ್ಲಿ ಬಹಳಷ್ಟು ಸೌಕರ್ಯಗಳಿವೆ ಎನ್ನಲಾಗಿದೆ. ಹೊಸದಾಗಿ ಆರಂಭವಾಗಲಿರುವ ಯು.ಕೆ. ಮಾಲ್ ಉದ್ಘಾಟನೆಯ ಸಂದರ್ಭದಲ್ಲಿ ತನ್ನ ಕನಸಿನ ಕಾರಾದ ರೋಲ್ಸ್‌ರಾಯ್ಸ್ ಊರಿಗೆ ಬರಲಿದೆ ಎಂದು ಯು.ಕೆ. ಯೂಸುಫ್ ಹೇಳಿದ್ದಾರೆಂದು ವರದಿಯಾಗಿದೆ.

ಈಗ ಮೆರ್ಸಿಡಿಸ್ ಬೆಂಝ್ ಕಾರನ್ನು ಬಳಸುತ್ತಿರುವ ಯೂಸುಫ್ ಕಾಸರಗೋಡ್‌ನಲ್ಲಿ ಪ್ರಥಮವಾಗಿ ಕಾರ್ಯಾರಂಭಿಸಲಿರುವ ಆಧುನಿಕ ಸೌಕರ್ಯವಿರುವ ನಾಲಪ್ಪಾಡುಕೆ ಶಾಪಿಂಗ್ ಮಾಲ್‌ನ ಪ್ರವರ್ತಕರು. ಕೇರಳದಹಲವು ಮುಂಚೂಣಿ ಉದ್ಯಮಿಗಳೊಂದಿಗೆ ಅವರು ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ತಾನು ಒಂದು ಖಾಸಗಿ ವಿಮಾನವನ್ನು ಹೊಂದಬೇಕೆಂಬುದು ತನ್ನ ಮುಂದಿನ ಕನಸು ಎಂದು ಯೂಸುಫ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News