ಆರೆಸ್ಸೆಸ್ ನಿಂದ ಬಾಲಕಿಯರ ಅಕ್ರಮ ಸಾಗಾಟ
Update: 2016-07-29 10:26 IST
ಹೊಸದಿಲ್ಲಿ, ಜು. 29 : ಔಟ್ ಲುಕ್ ನಿಯತಕಾಲಿಕ ನಡೆಸಿದ ಮೂರು ತಿಂಗಳ ತನಿಖಾ ಕಾರ್ಯಾಚರಣೆಯಲ್ಲಿ ಆರೆಸ್ಸೆಸ್ ಅಧೀನದ ಸಂಘಟನೆಗಳು ನಡೆಸುತ್ತಿರುವ ಆಘಾತಕಾರಿ ಮಕ್ಕಳ ಅಕ್ರಮ ಸಾಗಾಟ ಬಹಿರಂಗವಾಗಿದೆ. ದೇಶದ ಕಾನೂನನ್ನು ಉಲ್ಲಂಘಿಸಿ 31 ಬುಡಕಟ್ಟು ಸಮುದಾಯದ ಬಾಲಕಿಯರನ್ನು ಅಸ್ಸಾಂ ನಿಂದ ಗುಜರಾತ್ ಹಾಗು ಪಂಜಾಬ್ ಗೆ ಆರೆಸ್ಸೆಸ್ ಸಂಘಟನೆಗಳು ಅಕ್ರಮವಾಗಿ ಸಾಗಿಸುತ್ತವೆ ಎಂದು ವರದಿ ಹೇಳಿದೆ. 3 ಹಾಗು 11 ವರ್ಷದ ನಡುವಿನ ಈ ಬಾಲಕಿಯರನ್ನು ಅವರ ಹೆತ್ತವರಿಂದ ಸಂಪೂರ್ಣ ದೂರ ಮಾಡಿ ಅವರಿಗೆ ' ಹಿಂದುತ್ವದ ಜೀವನ ವಿಧಾನ ' ಕಳಿಸುವುದು ಆರೆಸ್ಸೆಸ್ ಗುರಿ ಎಂದು ಹೇಳಲಾಗಿದೆ. ತಮ್ಮ ಮಕ್ಕಳ ಕುರಿತ ಯಾವುದೇ ದಾಖಲೆ ಅಥವಾ ಚಿತ್ರಗಳನ್ನೂ ಆರೆಸ್ಸೆಸ್ ನಮ್ಮಿಂದ ಕಸಿದುಕೊಂಡಿದೆ ಎಂದು ಬುಡಕಟ್ಟು ಮಹಿಳೆಯರು ದೂರಿದ್ದಾರೆ.
ಹೆಚ್ಚಿನ ವಿವರಗಳಿಗೆ ಈ ವೆಬ್ ಸೈಟ್ ಗೆ ಭೇಟಿ ನೀಡಿ.
http://www.outlookindia.com/
ವೀಡಿಯೊ ನೋಡಿ .