×
Ad

ಡೋಪಿಂಗ್ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ನರಸಿಂಗ್ ತಂದೆ ಆಗ್ರಹ

Update: 2016-07-30 23:33 IST

 ವಾರಣಾಸಿ, ಜು.30: ಡೋಪಿಂಗ್ ಹಗರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ಕುಸ್ತಿಪಟು ನರಸಿಂಗ್ ಯಾದವ್ ಅವರ ತಂದೆ ಹಾಗೂ ಇತರ ಹಲವು ಬೆಂಬಲಿಗರು ಇಲ್ಲಿನ ರವೀಂದ್ರಪುರಿಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂಸದೀಯ ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.

‘‘ನನ್ನ ಮಗ ‘ಮುಗ್ದ’. ಒಲಿಂಪಿಕ್ಸ್ ಗೇಮ್ಸ್‌ನಿಂದ ಹೊರಹಾಕಲು ಬಯಸಿದ್ದ ಶತ್ರುಳ ಸಂಚಿಗೆ ಆತ ಬಲಿಪಶುವಾಗಿದ್ದಾನೆ’’ ಎಂದು ನರಸಿಂಗ್ ಯಾದವ್ ತಂದೆ ಪಂಚಮ್ ಯಾದವ್ ಹೇಳಿದ್ದಾರೆ. ನರಸಿಂಗ್ ಹುಟ್ಟೂರು ನೀಮಾ ಹಾಗೂ ಇತರ ಹಳ್ಳಿಗಳ ಜನರು ಪ್ರಧಾನಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News