ಎರಡನೆ ಟೆಸ್ಟ್: ವೇಗದ ದಾಳಿಗೆ ಕುಸಿದ ವಿಂಡೀಸ್

Update: 2016-07-30 18:14 GMT

ಕಿಂಗ್ಸ್‌ಟನ್, ಜು.30: ವೆಸ್ಟ್‌ಇಂಡೀಸ್ ತಂಡ ಇಲ್ಲಿ ಆರಂಭಗೊಂಡ ಎರಡನೆ ಟೆಸ್ಟ್‌ನಲ್ಲಿ ಭಾರತದ ವೇಗದ ದಾಳಿಗೆ ತತ್ತರಿಸಿದೆ.
ಸಬೀನಾ ಪಾರ್ಕ್‌ನಲ್ಲಿ ಟೆಸ್ಟ್‌ನ ಮೊದಲ ದಿನ ಲಂಚ್ ವಿರಾಮದ ವೇಳೆಗೆ ವಿಂಡೀಸ್ 26 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 88 ರನ್ ಗಳಿಸಿದೆ.
 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್‌ಇಂಡೀಸ್ ತಂಡ ಇಶಾಂತ್ ಶರ್ಮ ದಾಳಿಗೆ ಸಿಲುಕಿ ಬೆನ್ನು ಬೆನ್ನಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಆರಂಭಿಕ ದಾಂಡಿಗ ಕ್ರೆಗ್ ಬ್ರಾಥ್‌ವೈಟ್ (1) ಅವರು ಮೂರನೆ ಓವರ್‌ನ ನಾಲ್ಕನೆ ಎಸೆತದಲ್ಲಿ ಇಶಾಂತ್ ಶರ್ಮಗೆ ವಿಕೆಟ್ ಒಪ್ಪಿಸಿದರು. ಮುಂದಿನ ಎಸೆತದಲ್ಲಿ ಡರೆನ್ ಬ್ರಾವೋ (0) ಖಾತೆ ತೆರೆಯದೆ ಬಂದ ದಾರಿಯಲ್ಲಿ ವಾಪಸಾದರು.
ಆರ್.ಚಂದ್ರಿಕಾ 5 ರನ್ ಗಳಿಸಿ ಮುಹಮ್ಮದ್ ಶಮಿ ಎಸೆತದಲ್ಲಿ ರಾಹುಲ್‌ಗೆ ಕ್ಯಾಚ್ ನೀಡಿದರು. 5. ಓವರ್‌ಗಳಲ್ಲಿ 7 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್‌ನ ಬ್ಯಾಟಿಂಗ್‌ನ್ನು ಮುನ್ನಡೆಸಿದ ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ಮತ್ತು ಬ್ಲಾಕ್‌ವುಡ್ ನಾಲ್ಕನೆ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು. ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳು ಬಾಕಿ ಇದ್ದಾಗ ಸ್ಪಿನ್ನರ್ ಆರ್ ಅಶ್ವಿನ್ ಅವರು ಬ್ಲಾಕ್‌ವುಡ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಬ್ಲಾಕ್‌ವುಡ್ 62 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 62 ರನ್ ಗಳಿಸಿದರು.
ಸ್ಯಾಮುಯೆಲ್ಸ್ ಔಟಾಗದೆ 14 ರನ್ ಗಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್ 26 ಓವರ್‌ಗಳಲ್ಲಿ 88/4( ಬ್ಲಾಕ್‌ವುಡ್ 62, ಸ್ಯಾಮುಯೆಲ್ಸ್ ಔಟಾಗದೆ 14; ಇಶಾಂತ್ ಶರ್ಮ 24ಕ್ಕೆ 2, ಶಮಿ 13ಕ್ಕೆ 1, ಅಶ್ವಿನ್ 13ಕ್ಕೆ 1).


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News