ಬ್ರೆಝಿಲ್ ಒಲಿಂಪಿಕ್ಸ್ ತಂಡಕ್ಕೆ ನೇಮರ್ ನಾಯಕ

Update: 2016-07-30 18:20 GMT

ರಿಯೊ ಡಿಜನೈರೊ, ಜು.30: ಫಾರ್ವರ್ಡ್ ಆಟಗಾರ ನೇಮರ್ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್ ಫುಟ್ಬಾಲ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ತಂಡದ ಮುಖ್ಯ ಕೋಚ್ ತಿಳಿಸಿದ್ದಾರೆ.

24ರ ಹರೆಯದ ನೇಮರ್ ಕಳೆದ ಎರಡು ವರ್ಷಗಳಿಂದ ಬ್ರೆಝಿಲ್‌ನ ಸೀನಿಯರ್ ಫುಟ್ಬಾಲ್ ತಂಡದ ನಾಯಕನಾಗಿದ್ದಾರೆ. ರಿಯೋದಲ್ಲಿ ನಾಯಕನ ಸ್ಥಾನ ತ್ಯಜಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ನೇಮರ್ ರಿಯೋದಲ್ಲಿ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಬ್ರೆಝಿಲ್ ಕೋಚ್ ರೋಜೆರಿಯೊ ಮಿಕಾಲೆ ಹೇಳಿದ್ದಾರೆ.

ನೇಮರ್ ಇತ್ತೀಚೆಗಿನ ದಿನಗಳಲಿ ಬ್ರೆಝಿಲ್ ತಂಡದಲ್ಲಿ ನೀಡುತ್ತಿರುವ ಪ್ರದರ್ಶನ ಪ್ರಶಾರ್ಹವಾಗಿದೆ. ಅವರು ಕಳೆದ 18 ತಿಂಗಳ ಅವಧಿಯಲ್ಲಿ ಅಶಿಸ್ತಿನ ವರ್ತನೆಗೆ ಐದು ಬಾರಿ ಕೆಂಪುಕಾರ್ಡ್ ಪಡೆದಿದ್ದಾರೆ.

ಬ್ರೆಝಿಲ್ ಇದೇ ಮೊದಲ ಬಾರಿ ತವರಿನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲಲು ಬಯಸಿದೆ. ಶನಿವಾರ ಜಪಾನ್ ವಿರುದ್ಧ ಸೌಹಾರ್ದ ಪಂದ್ಯ ಆಡುವುದರೊಂದಿಗೆ ಒಲಿಂಪಿಕ್ಸ್‌ಗೆ ತಯಾರಿ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News