×
Ad

ಹೊಸದಿಲ್ಲಿ: ಪ್ಲಾಸ್ಟಿಕ್ ದಾರ ಕೊರಳಿಗೆ ಸಿಲುಕಿ ಇಬ್ಬರು ಮಕ್ಕಳ ಸಾವು

Update: 2016-08-17 12:49 IST

ಹೊಸದಿಲ್ಲಿ,ಆ.17: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜ ಎಂದು ಕರೆಯಲಾಗುವ ಪ್ಲಾಸ್ಟಿಕ್ ದಾರ ಕೊರಳಿಗೆ ಸಿಲುಕಿ ಇಬ್ಬರು ಪುಟ್ಟ ಮಕ್ಕಳು ಮೃತರಾದ ಘಟನೆ ದಿಲ್ಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸ್ವಾತಂತ್ರ್ಯದಿನದಂದು ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಬೇರೆಬೇರೆ ಘಟನೆಗಳಲ್ಲಿ ಸಾಂಚಿ ಗೋಯಲ್(4),ಹಾರಿ(3) ಎಂಬ ಇಬ್ಬರು ಮಕ್ಕಳು ದಾರುಣವಾಗಿ ಸಾವೀಗಿಡಾಗಿದ್ದಾರೆ ಎಂದು ತಿಳಿದು ಬಂದಿದೆ.

 ಸೋಮವಾರ ಸಂಜೆ ಆರುಗಂಟೆ ಹೊತ್ತಿಗೆ ತಂದೆತಾಯಿಯರೊಂದಿಗೆ ಸಿನೆಮಾ ನೋಡಿ ಮನೆಗೆ ಮರಳುತ್ತಿದ್ದ ಸಾಂಚಿ ಗೋಯಲ್ ಎಂಬ ನಾಲ್ಕುವಯಸ್ಸಿನ ಬಾಲಕಿಯ ಕೊರಳಿಗೆ ಚೈನೀಸ್ ದಾರ ಅನಿರೀಕ್ಷಿತವಾಗಿ ಸುತ್ತು ಹಾಕಿಕೊಂಡಿತ್ತು. ಕಾರಿನ ಸನ್‌ರೂಫ್ ಮೂಲಕ ತಲೆ ಹೊರಗಿಟ್ಟ ವೇಳೆ ಸಾಂಚಿಯ ಕೊರಳಿಗೆ ದಾರ ಸುತ್ತುಕೊಂಡಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ಕಾರಿನಲ್ಲೇ ತಾಯಿಯ ಮಡಿಲಲ್ಲಿ ಮಗು ಕೊನೆಯುಸಿರು ಎಳೆಯಿತು ಎನ್ನಲಾಗಿದೆ.

  ಈ ಅಪಘಾತ ಸಂಭವಿಸಿ ಎರಡು ಗಂಟೆ ಬಳಿಕ ಸುಮಾರು ರಾತ್ರಿ ಎಂಟು ಗಂಟೆ ವೇಳೆಗೆ ತಂದೆತಾಯಿ ಮತ್ತು ಅಕ್ಕ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂರು ವರ್ಷದ ಬಾಲಕ ಹ್ಯಾರಿಯ ಕೊರಳಿಗೆ ಅನಿರೀಕ್ಷಿತವಾಗಿ ಪ್ಲಾಸ್ಟಿಕ್ ದಾರ ಸುತ್ತುಹಾಕಿಕೊಂಡಿತ್ತು. ಬಾಲಕಿ ಸಾಂಚಿಯಂತೆ ಹ್ಯಾರಿಕೂಡ ಕಾರಿನ ಸನ್‌ರೂಫ್‌ನ ಮೂಲಕ ತಲೆ ಹೊರಗೆ ಹಾಕಿದಾಗ ದಾರ ಸುತ್ತಿಕೊಂಡಿತ್ತು ಎನ್ನಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹ್ಯಾರಿಯೂ ಮೃತನಾದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News